×
Ad

ಇಂದು ಪ್ರೊ.ಎಂ.ಡಿ.ನಲಪತ್‌ರೊಂದಿಗೆ ಸಂವಾದ

Update: 2022-09-13 20:27 IST
ಸಾಂದರ್ಭಿಕ ಚಿತ್ರ

ಉಡುಪಿ, ಸೆ.13: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಯುನೆಸ್ಕೋ ಪೀಸ್ ಚೇರ್‌ನ ಪ್ರೊ.ಎಂ.ಡಿ.ನಲಪತ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಸೆ.14ರ ಬುಧವಾರ ಅಪರಾಹ್ನ 3.45ಕ್ಕೆ ಮಣಿಪಾಲದ ಹಳೆ ಟ್ಯಾಪ್ಮಿ ಕಟ್ಟಡದ ಸರ್ವೋದಯ ಸಭಾಂಗಣದಲ್ಲಿ ನಡೆಯಲಿದೆ. 

ಪ್ರೊ.ನಲಪತ್ ಅವರು ಜಿಯೋಪಾಲಿಟಿಕ್ಸ್ ನ ಮೊದಲ ಪ್ರಾಧ್ಯಾಪಕರಾಗಿದ್ದು ಮಾಹೆಯ ಯುನೆಸ್ಕೋ ಪೀಸ್ ಚೇರ್‌ನ ಮುಖ್ಯಸ್ಥರಾಗಿದ್ದಾರೆ. ಅವರು ಪತ್ರಕರ್ತರು ಸಹ ಆಗಿದ್ದು, ಟೈಮ್ಸ್ ಆಫ್ ಇಂಡಿಯಾ ಮತ್ತು ಮಾತೃಭೂಮಿ ಪತ್ರಿಕೆಗಳ ಸಂಪಾದಕರಾಗಿದ್ದರು. ‘ಪ್ರಾಕ್ಟೀಸ್ ಆಫ್ ಜಿಯೋಪಾಲಿಟಿಕ್ಸ್,’ ‘ಜರ್ನಿ ಆಫ್ ಎ ನೇಷನ್: 75 ಇಯರ್ಸ್ ಆಫ್ ಇಂಡಿಯನ್ ಫಾರಿನ್ ಪಾಲಿಸಿ’ ಸೇರಿದಂತೆ ಹಲವು ಕೃತಿಗಳನ್ನು ಅವರು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News