×
Ad

ಎಂಐಟಿಯ ಡಾ.ಮನೋಹರ ಪೈಗೆ ತಾಂತ್ರಿಕ ಶಿಕ್ಷಕರ ರಾಷ್ಟ್ರೀಯ ಪ್ರಶಸ್ತಿ

Update: 2022-09-13 21:02 IST
ಡಾ. ಮನೋಹರ ಪೈ

ಮಣಿಪಾಲ, ಸೆ.13: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಇನ್‌ಫಾರ್ಮೇಶನ್ ಕಮ್ಯುನಿಕೇಷನ್ ಟೆಕ್ನಾಲಜಿ (ಐಸಿಟಿ) ವಿಭಾಗದ ಪ್ರೊಪೆಸರ್ ಡಾ.ಮನೋಹರ ಪೈ ಎಂ.ಎಂ. ಅವರಿಗೆ ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದ ತಾಂತ್ರಿಕ ಶಿಕ್ಷಕರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಹೊಸದಿಲ್ಲಿಯ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಡಾ.ಪೈ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತ ಸರಕಾರದ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವರಾದ ಅನ್ನಪೂರ್ಣ ದೇವಿ, ರಾಜಕುಮಾರ್ ರಂಜನ್ ಸಿಂಗ್ ಹಾಗೂ ಡಾ.ಸುಭಾಷ್ ಸರ್ಕಾರ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ತಾಂತ್ರಿಕ ಶಿಕ್ಷಣದಲ್ಲಿ ಡಾ.ಪೈ ಅವರ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದ್ದು, ಪ್ರಶಸ್ತಿಯು ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಕಳೆದ ಮೂರು ದಶಕಗಳಿಂದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಮನೋಹರ ಪೈ, ಕಾಲೇಜಿನ ಐಸಿಟಿ ವಿಭಾಗ, ಇನ್ನೋವೇಷನ್ ಸೆಂಟರ್ ಹಾಗೂ ಎಂಯು ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯೂಬೇಟರ್‌ಗಳನ್ನು ಪ್ರಾರಂಭಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಅವರು ಐಸಿಟಿ ವಿಭಾಗದ ಮೊದಲ ಮುಖ್ಯಸ್ಥ, ಇನ್ನೋವೇಷನ್ ಸೆಂಟರ್‌ನ ಮೊದಲ ಸಹ ನಿರ್ದೇಶಕ, ಎಂಯುಟಿಬಿಐನ ಮೊದಲ ಸಿಇಓ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಅವರು ಮಾರ್ಗದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News