×
Ad

ಉಳ್ಳಾಲ: ಬಸ್ಸಿನಿಂದ ಎಸೆಯಲ್ಪಟ್ಟ ಪಿಯುಸಿ ವಿದ್ಯಾರ್ಥಿ ಮೆದುಳು ನಿಷ್ಕ್ರಿಯ

Update: 2022-09-13 22:15 IST
ಯಶರಾಜ್

ಉಳ್ಳಾಲ: ಚಲಿಸುತ್ತಿದ್ದ ಸಿಟಿ ಬಸ್‌ ನಿಂದ ಎಸೆಯಲ್ಪಟ್ಟು ಒಂದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಪಿಯುಸಿ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಉಳ್ಳಾಲ ಮಾಸ್ತಿಕಟ್ಟೆ, ಬೈದರಪಾಲು ನಿವಾಸಿ ತ್ಯಾಗರಾಜ್ ಮತ್ತು ಮಮತಾ ಕರ್ಕೇರ ದಂಪತಿಯ ಪುತ್ರ ಯಶರಾಜ್ (16) ಎಂಬ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದೆ.

ಯಶರಾಜ್ ನಗರದ ಎಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸಾಯನ್ಸ್  ವಿದ್ಯಾರ್ಥಿ. ಸೆ.7 ರಂದು ಬೆಳಗ್ಗೆ ಯಶರಾಜ್  ಮಾಸ್ತಿಕಟ್ಟೆಯಿಂದ ಸಿಟಿ ಬಸ್‌ ನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಅಡಂ ಕುದ್ರುವಿನಲ್ಲಿ ಬಸ್‌ ನಿಂದ ಹೊರಗೆ ಎಸೆಯಲ್ಪಟ್ಟಿದ್ದ. ತಲೆಗೆ ಗಂಭೀರ ಗಾಯಗೊಂಡಿದ್ದ ಯಶರಾಜನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಯಶರಾಜ್ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಂದು ಮಧ್ಯಾಹ್ನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತೊಕ್ಕೊಟ್ಟು ಸಂತ ಸೆಬೆಸ್ಟಿಯನ್‌ ಆಂಗ್ಲ ಮಾಧ್ಯಮ‌ ಪ್ರೌಢ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಯಶರಾಜ್ ಈ ವರ್ಷ ನಗರದ ಎಲೋಶಿಯಸ್ ಕಾಲೇಜಿಗೆ ದಾಖಲಾಗಿದ್ದ. ಯಶರಾಜ್ ತಂದೆ ತ್ಯಾಗರಾಜ್ ಹೊಟೇಲ್ ಮಾಲಕರಾಗಿದ್ದು, ತಾಯಿ ಮಮತಾ ಕೊಲ್ಯದ ಜಾಯ್ ಲ್ಯಾಂಡ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News