ಪುಣೆಯಲ್ಲಿ ರಸ್ತೆ ಅಪಘಾತ: ಮಂಗಳೂರು ಮೂಲದ ದಂತ ವೈದ್ಯೆ ಮೃತ್ಯು

Update: 2022-09-14 06:15 GMT

ಮಂಗಳೂರು, ಸೆ.14: ಪುಣೆಯಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ದಂತ ವೈದ್ಯೆ (Dentist) ಯೊಬ್ಬರು ಮೃತಪಟ್ಟಿರುವುದು ವರದಿಯಾಗಿದೆ.

ಮೃತರನ್ನು ನಗರದ ವೆಲೆನ್ಸಿಯ ನಿವಾಸಿ ಡಾ.ಜಿಶಾ ಜೋನ್ (27) ಎಂದು ಗುರುತಿಸಲಾಗಿದೆ. ಡಾ.ಜಿಶಾ ಜೋನ್ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮೃತರು ಪತಿ, ತಂದೆ-ತಾಯಿ, ಸಹೋದರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತದೇವನ್ನು ಮಂಗಳೂರಿಗೆ ತರಲಾಗಿದ್ದು, ಅಂತಿಮ ದರ್ಶನಕ್ಕೆ ಇಂದು (ಸೆ.14) ಅಪರಾಹ್ನ 2:30ಕ್ಕೆ ಜೆಪ್ಪು ಸೈಂಟ್ ಆ್ಯಂಟೋನಿ ಚರ್ಚ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ | ರಸ್ತೆ ವಿಭಜಕಕ್ಕೆ ಕಾರು ಢಿಕ್ಕಿ: ಮಹಿಳೆ ಸಹಿತ ಮೂವರು ಮೃತ್ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News