ಕಾಪು: ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಪ್ರತಿಭಟನೆ
Update: 2022-09-14 19:12 IST
ಕಾಪು, ಸೆ.14: ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆಯನ್ನು ಖಂಡಿಸಿ ಜೆಡಿಎಸ್ ಪಕ್ಷದ ವತಿಯಿಂದ ಬುಧವಾರ ಕಾಪು ಪೇಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸುತ್ತಿರುವ ನಮ್ಮ ದೇಶದಲ್ಲಿ ಆಯಾ ಪ್ರದೇಶಕ್ಕನುಗುಣ ವಾಗಿ ಪ್ರಾದೇಶಿಕತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದ್ದು ಅಂತಹ ಸಂದರ್ಭದಲ್ಲಿ ಹಿಂದಿ ಭಾಷೆಗೆ ಪ್ರಾಮುಖ್ಯತೆ ನೀಡುತ್ತಿರುವುದು ಖಂಡನೀಯವಾಗಿದೆ. ಈ ಬಗ್ಗೆ ರಾಜ್ಯದ ಜನರೆಲ್ಲರೂ ಸಂಘಟಿತ ಹೋರಾಟ ನಡೆಸಬೇಕು ಎಂದರು.
ಜೆಡಿಎಸ್ ಮುಖಂಡರಾದ ಜಯರಾಮ ಆಚಾರ್ಯ, ಸಂಕಪ್ಪ ಎ., ಉಮೇಶ್ ಕರ್ಕೇರ, ಭರತ್ ಶೆಟ್ಟಿ, ಇಕ್ಬಾಲ್ ಆತ್ರಾಡಿ, ಶ್ರೀಕಾಂತ್ ಪೂಜಾರಿ, ಸುಧಾಕರ್ ಶೆಟ್ಟಿ, ಸಂಜಯ್ ಕುಮಾರ್, ಹುಸೈನ್ ಹೈಕಾಡಿ, ಮನ್ಸೂರು ಇಬ್ರಾಹಿಂ, ವಿಮಲ, ಇಸ್ಮಾಯಿಲ್ ಪಲಿಮಾರ್, ವೆಂಕಟೇಶ ಎಂ.ಟಿ., ಶಂಶುದ್ದಿನ್, ಅಬ್ದುಲ್ ರಜಾಕ್, ಚಂದ್ರಹಾಸ ಎರ್ಮಾಳು ಮೊದಲಾದವರು ಉಪಸ್ಥಿತರಿದ್ದರು.