ಸೌಂದರ್ಯ ಸ್ಪರ್ಧೆಯ ಸ್ಪರ್ಧಿ ತೈವಾನ್ ಧ್ವಜ ಹಿಡಿಯಲು ಚೀನಾದ ಅಡ್ಡಿ

Update: 2022-09-14 18:16 GMT

ತೈಪೆ, ಸೆ.14: ಮಲೇಶ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೈವಾನ್‌ನ ಸುಂದರಿ ಕಾವೊ ಮನ್‌ಜುಂಗ್ ವೇದಿಕೆಯಲ್ಲಿ ತೈವಾನ್‌ನ ಧ್ವಜ ಬೀಸುವುದಕ್ಕೆ ಚೀನಾದ ಆಕ್ಷೇಪದ ಹಿನ್ನಲೆಯಲ್ಲಿ ಕಾರ್ಯಕ್ರಮದ ಪ್ರಾಯೋಜಕರು ತೈವಾನ್ ಧ್ವಜ ಹಿಡಿಯಲು ಅವಕಾಶ ನಿರಾಕರಿಸಲಾಗಿದೆ ಎಂದು ತೈವಾನ್ ಆರೋಪಿಸಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇತರ ಸ್ಪರ್ಧಿಗಳು ತಮ್ಮ ತಮ್ಮ ದೇಶದ ಧ್ವಜದೊಂದಿಗೆ ಸಂಭ್ರಮಿಸುತ್ತಿದ್ದರೆ, ಅವಕಾಶ ನಿರಾಕರಿಸಲ್ಪಟ್ಟ ಕಾವೊ ಮನ್‌ಜುಂಗ್ ವೇದಿಕೆಯಲ್ಲೇ ಕಣ್ಣೀರು ಸುರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 ಮಲೇಶ್ಯಾದ ಕಾರ್ಯಕ್ರಮ ಸಂಘಟಕರ ಮೇಲೆ ಒತ್ತಡ ಹೇರಿದ ಚೀನಾ , ಕಾವೊ ಜುಂಗ್ ನಮ್ಮ ದೇಶದ ಧ್ವಜ ಹಿಡಿಯಲು ಅವಕಾಶ ತಡೆಹಿಡಿದಿದೆ. ಮಲೇಶ್ಯಾದಲ್ಲಿನ ತನ್ನ ರಾಜತಾಂತ್ರಿಕ ಅಧಿಕಾರಿಯ ಮೂಲಕ ಚೀನಾ ಒತ್ತಡ ಹೇರಿದೆ. ಚೀನಾ ನೀಚ ಕೃತ್ಯ ನಡೆಸಿದೆ. ಧ್ವಜ ಪ್ರದರ್ಶಿಸುವುದು ವಿವಾದಾತ್ಮಕ ಕೆಲಸವೇ ಎಂದು ತೈವಾನ್‌ನ ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ಪ್ರಶ್ನಿಸಲಾಗಿದೆ.

 ಸ್ವಯಂ ಆಡಳಿತ ವ್ಯವಸ್ಥೆಯುಳ್ಳ ತೈವಾನ್ ತನ್ನ ವ್ಯಾಪ್ತಿಗೆ ಸೇರಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ ಅಂತರಾಷ್ಟ್ರೀಯ ಮಟ್ಟದಲ್ಲಿ ತೈವಾನ್‌ಗೆ ದೇಶವೆಂಬ ಮಾನ್ಯತೆ ನೀಡುವುದನ್ನು ಉಗ್ರವಾಗಿ ವಿರೋಧಿಸುತ್ತಿದೆ. ಈ ಹಿಂದೆ ಅಮೆರಿಕದ ಪಾಪ್ ಗಾಯಕರಾದ ಮಡೋನ್ನ ಮತ್ತು ಕ್ಯಾಥಿ ಪೆರೀ ವೇದಿಕೆಯಲ್ಲಿ ತೈವಾನ್‌ನ ಧ್ವಜ ಪ್ರದರ್ಶಿಸಿದ್ದಕ್ಕೆ ಚೀನಾ ಆಕ್ಷೇಪಿಸಿತ್ತು. 2016ರಲ್ಲಿ ತೈವಾನ್‌ನ ಪಾಪ್ ಗಾಯಕಿ ಆನ್‌ಲೈನ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ತೈವಾನ್ ಧ್ವಜ ಪ್ರದರ್ಶಿಸಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News