ʼಮುಕ್ರಿ ಫ್ಯಾಮಿಲಿʼ ಸಭೆ; ನೂತನ ಪದಾಧಿಕಾರಿಗಳ ಆಯ್ಕೆ
Update: 2022-09-15 19:10 IST
ಉಪ್ಪಿನಂಗಡಿ, ಸೆ.15: ʼಮುಕ್ರಿ ಫ್ಯಾಮಿಲಿʼ ಸಭೆಯು ಇತ್ತೀಚೆಗೆ ನಡೆಯಿತು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸುಹೈಲ್ ಉಪ್ಪಿನಂಗಡಿ, ಉಪಾಧ್ಯಕ್ಷರುಗಳಾಗಿ ಸಿದ್ದೀಕ್ ಉಪ್ಪಳ, ಸಿದ್ದೀಕ್ ನೀರಜೆ, ಕಾರ್ಯದರ್ಶಿಯಾಗಿ ಜಲೀಲ್ ಮುಕ್ರಿ, ಜೊತೆ, ಕಾರ್ಯದರ್ಶಿ:- ಮೈಮೂನ ಜನರಲ್, ಉಮರ್ ಫಾರೂಕ್, ಕೋಶಾಧಿಕಾರಿಯಾಗಿ ಶಮೀಮ್ ಇಬ್ರಾಹಿಂ ಅವರು ಆಯ್ಕೆಯಾದರು.
ಕೋಶಾಧಿಕಾರಿ ಶಮೀಮ್ ಇಬ್ರಾಹಿಂ ಲೆಕ್ಕ ಪತ್ರ ಮಂಡಿಸಿದರು. ಸಿದ್ದೀಕ್ ಉಪ್ಪಳ ಸ್ವಾಗತಿಸಿದರು. ಮೈಮೂನ ಜನರಲ್ ವಂದಿಸಿದರು. ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.