ಅಡ್ಯಾರ್-ಅರ್ಕುಳ: ಯೂತ್ ಜೋಡೊ-ಬೂತ್ ಜೋಡೊ ಕಾರ್ಯಕ್ರಮ
ಮಂಗಳೂರು, ಸೆ.15: ಯುವ ಕಾಂಗ್ರೆಸ್ ದ.ಕ. ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಅಡ್ಯಾರ್-ಅರ್ಕುಳ ಗ್ರಾಮದಲ್ಲಿ ಯೂತ್ ಜೋಡೊ-ಬೂತ್ ಜೋಡೊ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ‘ಭಾರತ್ ಜೋಡೊ ಯಾತ್ರೆ’ಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಗುರುಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಮುಫೀದ್, ಮಾಜಿ ಶಾಸಕ ಮೊಯ್ದಿನ್ ಬಾವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ, ಗುರುಪುರ ಬ್ಲಾಕ್ ಮಾಜಿ ಅಧ್ಯಕ್ಷ ಪೃಥ್ವಿರಾಜ್ ಆರ್.ಕೆ, ಧಾರ್ಮಿಕ ದತ್ತಿ ಸದಸ್ಯ ಪದ್ಮನಾಭ, ವಲಯ ಅಧ್ಯಕ್ಷ ಸಮದ್, ಮಾಜಿ ಅಧ್ಯಕ್ಷ ಸತ್ತಾರ್, ಗ್ರಾಪಂ ಅಧ್ಯಕ್ಷೆ ಝೀನತ್, ಉಪಾಧ್ಯಕ್ಷ ಅಮಿಲ್ದ ಪಿಂಟೋ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಯಾರ್, ಉಮೈ ಬಾನು, ನವೀದ್ ಅಖ್ತರ್, ಬಶೀರ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಇಬ್ರಾಹೀಂ ನವಾಝ್, ಗ್ರಾಪಂ ಸದಸ್ಯರಾದ ದಾಮೋದರ್ ಶೆಟ್ಟಿ, ರೊನಾಲ್ಡ್, ಪ್ಲಾವಿಯ, ತುಳಸಿ, ಅನಿತಾ, ಶಬೀರ್, ರಹಿಮಾನ್ ವಳಚ್ಚಿಲ್, ಫರಾಝ್, ಶಮೀರ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.