ವಾಂತಿ ಭೇದಿಯಿಂದ ಮಹಿಳೆ ಮೃತ್ಯು

Update: 2022-09-15 15:53 GMT

ಗಂಗೊಳ್ಳಿ, ಸೆ.15: ವಿಪರೀತ ಹೊಟ್ಟೆ ನೋವು, ವಾಂತಿ ಹಾಗೂ ಭೇದಿಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೆ.15ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಗಂಗೊಳ್ಳಿಯ ಗುಡ್ಡೆಹೌಸ್ ನಿವಾಸಿ ಮುಹಮ್ಮದ್ ಜಾಹೀದ್ ಎಂಬವರ ಪತ್ನಿ ಅಲ್ಫಿನಾ ಇರ್ಷಾದ್ ಶೇಖ್ (27) ಎಂದು ಗುರುತಿಸಲಾಗಿದೆ.  ಇವರಿಗೆ ಸೆ.14ರಂದು ರಾತ್ರಿ ವಿಪರೀತ ಹೊಟ್ಟೆ ನೋವು, ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಇವರು, ಹೆಚ್ಚಿನ ಚಿಕಿತ್ಸೆ ಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News