×
Ad

ಅ.1-2ರಂದು ಮಂಗಳೂರಿನಲ್ಲಿ ‘ಬಿಗ್ ಶೋ’: ಕಟ್ಟಡ ನಿರ್ಮಾಣ ಉದ್ಯಮದ ಬೃಹತ್ ಪ್ರದರ್ಶನ, ಸಮ್ಮೇಳನ

Update: 2022-09-16 15:24 IST

ಮಂಗಳೂರು, ಸೆ.16: ಝೆಡ್‌ಎಂಝೆಡ್ ಈವೆಂಟ್ಸ್‌ನ ಸಂಯೋಜನೆಯಲ್ಲಿ ಶಂಕರ ಬಿಲ್ಡ್ ಪ್ರೋ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ಐಐಐಡಿ ಮಂಗಳೂರು ಸಂಸ್ಥೆಯ ಸಹಭಾಗಿತ್ವದಲ್ಲಿ ಅಕ್ಟೋಬರ್ 1 ಮತ್ತು 2ರಂದು ಮಂಗಳೂರಿನಲ್ಲಿ ‘ಬಿಗ್ ಶೋ’ ಎಂಬ ಕಟ್ಟಡ ನಿರ್ಮಾಣ ಉದ್ಯಮದ ಬೃಹತ್ ಪ್ರದರ್ಶನ ಮತ್ತು ಸಮ್ಮೇಳನವನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಝೆಡ್‌ಎಂಝೆಡ್ ಈವೆಂಟ್ಸ್‌ನ ಆಡಳಿತ ನಿರ್ದೇಶಕ ಝಹೀರ್ ಅಹ್ಮದ್, ಕಟ್ಟಡ ನಿರ್ಮಾಣ ಉದ್ಯಮದ ವಿವಿಧ ವಿಭಾಗಳಿಗೆ ಸಂಬಂಧಿಸಿದ 100ಕ್ಕೂ ಅಧಿಕ ವಿವಿಧ ಬ್ರಾಂಡ್‌ಗಳ ಉತ್ಪನ್ನಗಳ ಪ್ರದರ್ಶನ ಇರಲಿದ್ದು, ನಗರ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಆರ್ಕಿಟೆಕ್ಚರ್, ಇಂಜಿನಿಯರಿಂಗ್ ಮತ್ತು ನಿರ್ಮಾಣ (ಎಇಸಿ) ಉದ್ಯಮ ವ್ಯಾಪಾರದ ಬೃಹತ್ ಪ್ರದರ್ಶನ ಇದಾಗಲಿದ್ದು, ವಾಸ್ತುಶಿಲ್ಪಿಗಳು, ಬಿಲ್ಡರ್‌ಗಳು, ಇಂಜಿನಿಯರ್‌ಗಳು, ಗುತ್ತಿಗೆದಾರರು, ಇಂಟೀರಿಯರ್ ಡಿಸೈನರ್ಸ್, ಡೀಲರ್‌ಗಳು ಮಾತ್ರವಲ್ಲದೆ ಸಾರ್ವಜನಿಕರು ಕೂಡಾ ಈ ಪ್ರದರ್ಶನದಲ್ಲಿ ಭಾಗವಹಿಸಿ ಕಟ್ಟಡ ನಿರ್ಮಾಣದ ನವನವೀನ ಉತ್ಪನ್ನಗಳನ್ನು ವೀಕ್ಷಿಸುವ ಮಾಹಿತಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಪ್ರದರ್ಶನದ ಜತೆಗೆ ಕಟ್ಟಡ ನಿರ್ಮಾಣದ ತಜ್ಞರಿಂದ ಕೂಡಿದ ಸಮ್ಮೇಳನವನ್ನೂ ಆಯೋಜಿಸಲಾಗಿದೆ. ಅ.1ರಂದು ಬೆಳಗ್ಗೆ 9:30ಕ್ಕೆ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ.

ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನ ವಿವಿಧ ಸಭಾಂಗಣಗಳಲ್ಲಿ ಪ್ರದರ್ಶನ ಮತ್ತು ಸಮ್ಮೇಳನ ನಡೆಯಲಿದ್ದು, ಜೈಸಿಮ್ ಫೌಂಟೇನ್‌ಹೆಡ್‌ನ ಸಂಸ್ಥಾಪಕ ಕೃಷ್ಣ ರಾವ್ ಜೈಸಿಮ್, ನೈಟ್ ಫ್ರಾಂಕ್ ಪ್ರೈ. ಲಿಮಿಟೆಡ್‌ನ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸರ್ವಿಸಸ್‌ನ ಮುಖ್ಯಸ್ಥರು ಹಾಗೂ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ದೆಬೆನ್ ಮೊಝಾ, ಶಂಕರ ಬಿಲ್ಡಿಂಗ್ ಪ್ರಾಡೆಕ್ಟ್ಸ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಸುಕುಮಾರ್ ಶ್ರೀನಿವಾಸ್, ಇಂಡಿಯನ್ ಡಿಸೈನ್ ಸ್ಕೂಲ್‌ನ ಅಧ್ಯಕ್ಷ ಮುಹಮ್ಮದ್ ನಿಸಾರ್, ಎಎಲ್‌ಇಸಿ- ಯುಎಇಯ ಪ್ಲಾನಿಂಗ್ ಮ್ಯಾನೇಜರ್ ಶಫ್‌ಶೀನ್ ಫಮೀಝ್, ನಿಯೋಕೋಟ್ಸ್ ಡೆಕೊರೇಟಿವ್ ಕೋಟಿಂಗ್ಸ್‌ನ ಸಹ ಸಂಸ್ಥಾಪಕ ಪವನ್ ಜೈನ್ ಮೊದಲಾದವರು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಝಹೀರ್ ಅಹ್ಮದ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಝೆಡ್‌ಎಂಝೆಡ್ ಈವೆಂಟ್ಸ್‌ನ ಅಧ್ಯಕ, ಮುಹಮ್ಮದ್ ಹುಸೇನ್, ಶಂಕರ ಬಿಲ್ಡ್‌ಪ್ರೋ ಮುಖ್ಯಸ್ಥರಾದ ಧನಂಜಯ್ ಮಿರ್ಲೆ ಶ್ರೀನಿವಾಸ್, ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಇಂಟೀರಿಯರ್ ಡಿಸೈನರ್ಸ್ (ಐಐಐಡಿ)ಯ ಜಂಟಿ ಕಾರ್ಯದರ್ಶಿ ರಮಾನಾಥ್ ನಾಯಕ್, ಝೆಡ್‌ಎಂಝೆಡ್ ಈವೆಂಟ್ಸ್‌ನ ಯೋಜನಾ ಕಾರ್ಯನಿರ್ವಾಹಕಿ ರಕ್ಷಿತಾ ಶೆಟ್ಟಿ, ಎ.ಕೆ. ಗ್ರೂಪ್‌ನ ಚೀಫ್‌ಸೇಲ್ಸ್ ಆಫೀಸರ್ ಅಬ್ದುಲ್ ರವೂಫ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News