×
Ad

ಪುತ್ತೂರು: ʼಹೋಂ ಪ್ರೊಡೆಕ್ಟ್ʼ ಮಾರಾಟ ಮಾಡುತ್ತಿದ್ದ ಯುವಕ-ಯುವತಿಯನ್ನು ಪೊಲೀಸರಿಗೊಪ್ಪಿಸಿದ ಹಿಂದುತ್ವ ಸಂಘಟನೆ

Update: 2022-09-16 19:44 IST

ಪುತ್ತೂರು: ಹೋಂ ಪ್ರೊಡೆಕ್ಟ್ ಮಾರಾಟ ಮಾಡುತ್ತಿದ್ದ ಇಬ್ಬರು ಬೇರೆ ಬೇರೆ ಧರ್ಮದ ಯುವಕ ಯುವತಿಯನ್ನು ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಲವ್‍ ಜಿಹಾದ್ ಎಂದು ಆರೋಪಿಸಿ ಪುತ್ತೂರು ನಗರ ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

ಎಸ್.ಕೆ.ಗ್ರೂಪ್ ಎಂಬ ಹೆಸರಿನ ಸಂಸ್ಥೆಯಲ್ಲಿ ಮಾರುಕಟ್ಟೆ ಪ್ರತಿನಿಧಿಗಳಾಗಿರುವ ಕುಂದಾಪುರದ ಯುವತಿ ಹಾಗೂ ಕೋಟೇಶ್ವರದ ಯುವಕ ಜೊತೆಯಾಗಿ ಪುತ್ತೂರು ನಗರದಲ್ಲಿ ಹೋಂ ಪ್ರೊಡೆಕ್ಟ್ ಗಳನ್ನು ಮಾರಾಟ ನಡೆಸುತ್ತಿದ್ದರು. ‌

ನಗರದ ತೆಂಕಿಲದಲ್ಲಿ ಅವರು ತಮ್ಮ ಪ್ರೊಡೆಕ್ಟ್ ಗಳನ್ನು ಮಾರಾಟ ಮಾಡುತ್ತಿದ್ದ ವೇಳೆ  ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಅವರನ್ನು ತಡೆದು ವಿಚಾರಿಸಿದ್ದರು. ಅವರಿಬ್ಬರು ಬೇರೆ ಬೇರೆ ಧರ್ಮದವರು ಎಂದು ತಿಳಿದ ಬಳಿಕ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ಇದೊಂದು ಲವ್‍ ಜಿಹಾದ್ ಪ್ರಕರಣವೆಂದು ಹೇಳಿ ಪುತ್ತೂರು ನಗರ ಠಾಣೆಯ ಮುಂಭಾಗದಲ್ಲಿ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಸೇರಿದ ಘಟನೆಯೂ ನಡೆದಿದೆ.

ಈ ಬಗ್ಗೆ ನಗರ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News