ಪೊಲ್ಯ: ಉಚಿತ ನೇತ್ರ- ಆರೋಗ್ಯ ತಪಾಸಣೆ ಶಿಬಿರ
ಕಾಪು : ಪೊಲ್ಯ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿ ಹಾಗೂ ಪೊಲ್ಯನ್ಸ್ ಸಂಘಟನೆ, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ,ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ವಿಭಾಗಗಳ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ಆರೋಗ್ಯ ತಪಾಸಣೆ ಶಿಬಿರವನ್ನು ಇತ್ತೀಚೆಗೆ ಪೊಲ್ಯ ಮಸೀದಿ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಗ್ರಾಮ ಪಂಚಾಯತ್ ಸದಸ್ಯರಾದ ಮಜೀದ್ ಹಸನ್, ರುಮನ್, ಅಬ್ದುಲ್ ರಜಾಕ್, ಲೀಲಾ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಮಸೀದಿ ಅಧ್ಯಕ್ಷ ಅಲಿಯಾಬ್ಬ, ಗೌರವಾಧ್ಯಕ್ಷ ಅತೀಂ, ಪ್ರಧಾನ ಕಾರ್ಯದರ್ಶಿ ಹನೀಫ್, ಕಾರ್ಯದರ್ಶಿ ಇಬ್ರಾಹಿಮ್, ಸದಸ್ಯರಾದ ಶಬ್ಬೀರ್, ಪೊಲ್ಯನ್ಸ್ ಅಧ್ಯಕ್ಷ ಶಫಿ, ಪೊಲ್ಯನ್ಸ್ ಗಲ್ಫ್ ಸದಸ್ಯ ಹಂಝ ಮುಹಮ್ಮದ್, ಪ್ರಾಥಮಿಕ ಆರೋಗ್ಯ ಕೇಂದ್ರದ ರಾಜೇಶ್ವರಿ, ಶ್ಯಾಮಲ, ಪ್ರಸಾದ್ ನೇತ್ರಾಲಯದ ಡಾ.ವೃಂದಾ, ಉಷಾಸ ಮಸೀದಿ ಖತೀಬ್ ಅಲಿ ಮದನಿ, ಸದರ್ ಇಲಿಯಾಸ್ ವಾರಿಸಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ಧರು. ಸುಮಾರು 120 ಮಂದಿ ಶಿಬಿರದ ಪ್ರಯೋಜನ ಪಡೆದರು.