×
Ad

ಉಡುಪಿ: ನೀಟ್ ಸರ್ಜರಿಯಲ್ಲಿ ಡಾ. ಆತೀಶ್ ಶೆಟ್ಟಿ ದೇಶಕ್ಕೆ ಪ್ರಥಮ ರ‍್ಯಾಂಕ್

Update: 2022-09-16 20:40 IST
ಡಾ.ಆತೀಶ್ ಶೆಟ್ಟಿ 

ಉಡುಪಿ, ಸೆ.16: ನ್ಯಾಷನಲ್ ಎಲಿಜಿಬಿಟಿ ಕಮ್ ಎಂಟ್ರೆಂಸ್ ಟೆಸ್ಟ್ ಸೂಪರ್ ಸ್ಪೆಶಾಲಿಟಿ (The National Eligibility cum Entrance Test)ಯ ಸರ್ಜರಿ ವಿಭಾಗದ ಪರೀಕ್ಷೆಯಲ್ಲಿ ಕುಂದಾಪುರ ಮೂಲದ ಡಾ.ಆತೀಶ್ ಶೆಟ್ಟಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಡಾ.ಬಾಲಕೃಷ್ಣ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿ ಪುತ್ರರಾಗಿರುವ ಇವರು, ಮಣಿಪಾಲ ಕೆಎಂಸಿಯಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು. ಬಳಿಕ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂಎಸ್ ಪದವಿ ಮುಗಿಸಿದ್ದರು. ಪ್ರಸ್ತುತ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಗ್ರಾಮೀಣ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News