ಲಾರಿಯ ಐದು ಚಕ್ರ ಕಳವು
Update: 2022-09-16 20:45 IST
ಬೈಂದೂರು, ಸೆ.16: ಶಿರೂರು ಟೋಲ್ ಗೇಟ್ ಸಮೀಪ ಸೆ.14ರಂದು ರಾತ್ರಿ ವೇಳೆ ನಿಲ್ಲಿಸಿದ್ದ 16 ಚಕ್ರದ ಲಾರಿಯ ಸ್ಟೆಪ್ನಿ ಸಹಿತ ಐದು ಚಕ್ರಗಳು ಕಳವಾಗಿದ್ದು, ಇವುಗಳ ಮೌಲ್ಯ 1,85,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.