ಎಸ್‌ಸಿಓಗೆ ಭಾರತದ ಅಧ್ಯಕ್ಷತೆಗೆ ಚೀನಾ ಬೆಂಬಲ: ಕ್ಸಿಜಿನ್ ಪಿಂಗ್
Update: 2022-09-16 23:19 IST
ಸಮರ್ಖಂಡ್,ಸೆ.16: ಮುಂದಿನ ವರ್ಷ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಶುಕ್ರವಾರ ಶುಭ ಹಾರೈಸಿದ್ದಾರೆ. ಶೃಂಗಸಭೆಯ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಎಸ್‌ಸಿಓ ಶೃಂಗಸಭೆಯನ್ನು ಆಯೋಜಿಸುವುದಕ್ಕೆ ತನ್ನ ದೇಶವು ಭಾರತಕ್ಕೆ ಬೆಂಬಲ ನೀಡುತ್ತದೆ ಎಂದವರು ಹೇಳಿದರು. ಭಾರತವು 2023ರಲ್ಲಿ ಎಸ್‌ಸಿಓ ಶೃಂಗಸಭೆಯ ಆತಿಥ್ಯ ವಹಿಸಲಿದೆ.