×
Ad

ಶಾಂಘೈ ಶೃಂಗ ಸಭೆ: ಮುಗುಳ್ನಗೆಯೂ ಇಲ್ಲ, ಹಸ್ತಲಾಘವವೂ ಇಲ್ಲ; ಮೋದಿ-ಕ್ಸಿ ಜಿನ್ ನಡುವೆ ಅಂತರ?

Update: 2022-09-16 23:37 IST

ಸಮರ್ಖಂಡ್,ಸೆ.16: ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಎರಡು ವರ್ಷಗಳ ಹಿಂದೆ ಭಾರತ ಹಾಗೂ ಚೀನಾ ನಡುವೆ ಸಂಘರ್ಷವೇರ್ಪಟ್ಟ ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಉಜ್ಭೇಕಿಸ್ತಾನ ಸಮರ್ಖಂಡ್‌ನಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ ಶುಕ್ರವಾರ ಒಂದೇ ವೇದಿಕೆಯನ್ನು ಹಂಚಿಕೊಂಡರು. ಆದರೆ ಶೃಂಗಸಭೆಯಲ್ಲಿ ಉಭಯ ನಾಯಕರು ೂ ಪರಸ್ಪರ ಅಂತರವನ್ನು ಕಾಯ್ದುಕೊಂಡಿರುವುದಾಗಿ ಇಂಡಿಯಾ ಟುಡೇ ಸುದ್ದಿ ಸಂಸ್ಥೆ ವರದಿ ಮಾಡಿದೆ.

   ಎಸ್‌ಸಿಓ ಶೃಂಗಸಭೆಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಭೋಜನಕೂಟವನ್ನು ಆಯೋಜಿಸಲಾಗಿತ್ತಾದರೂ, ಮೋದಿಯವರು ಶುಕ್ರವಾರವಷ್ಟೇ ಶೃಂಗಸಭೆಗೆ ಆಗಮಿಸಿದ್ದರು. ಸಮಾವೇಶದ ಪ್ರಯುಕ್ತ ಆಯೋಜಿಸಲಾಗಿದ್ದ ಫೋಟೋಸೆಶನ್‌ನಲ್ಲಿ ಮೋದಿ ಹಾಗೂ ಕ್ಸಿಜಿನ್ ಪಿಂಗ್ ಒಂದೇ ವೇದಿಕೆಯಲ್ಲಿ ನಿಂತುಕೊಂಡಿದ್ದರಾದರೂ , ಇಬ್ಬರೂ ಪರಸ್ಪರ ಮುಗುಳ್ನಗೆಯನ್ನು ಪ್ರದರ್ಶಿಸಲಿಲ್ಲ, ಅಲ್ಲದೆ ಹಸ್ತಲಾಘವವನ್ನು ಕೂಡಾ ಮಾಡಲಿಲ್ಲವೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News