×
Ad

ರಾಹುಲ್ ಗಾಂಧಿ ಜೊತೆ ಕೈ ಜೋಡಿಸಲು ಇನಾಯತ್ ಅಲಿ ಮುಲ್ಕಿ ಕರೆ

Update: 2022-09-17 18:35 IST

ಮಂಗಳೂರು, ಸೆ.17: ಭ್ರಷ್ಟಾಚಾರದ ನಿರ್ಮೂಲನೆಯ ಪಣ ತೊಟ್ಟು ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ಈಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಾಗಾಗಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಕಾರ್ಯದಲ್ಲಿ ನಿರತವಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಜೊತೆ ಎಲ್ಲರೂ ಕೈಜೋಡಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ ಕರೆ ನೀಡಿದರು.

ಇನಾಯತ್ ಅಲಿ ಅಭಿಮಾನಿ ಬಳಗ ಗುರುಪುರ ವಲಯ ಮತ್ತು ಲಯನ್ಸ್ ಕ್ಲಬ್(ರಿ) ಮುಚ್ಚೂರು ನೀರುಡೆ ಘಟಕದ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಗಂಜಿಮಠದಲ್ಲಿ ನಡೆದಿದ್ದ ಉಚಿತ ಜನಸ್ನೇಹಿ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಇನಾಯತ್ ಅಲಿ ಅಭಿಮಾನಿ ಬಳಗದ ಪ್ರಮುಖರು, ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ಶುಕ್ರವಾರ ಆಯೋಜಿಸಲಾದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದ್ಯ ತಾನು ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದರು.

ಅಭಿಮಾನಿ ಬಳಗದ ವಲಯಾಧ್ಯಕ್ಷ ಹರಿಯಪ್ಪ ಮುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಅಕ್ಬರ್ ಬಾದ್‌ಶಹಾ ಸ್ವಾಗತಿಸಿ, ವಂದಿಸಿದರು.

ಮುಖ್ಯ ಅತಿಥಿಗಳಾಗಿ ನೌಷಾದ್ ಹಾಜಿ ಸೂರಲ್ಪಾಡಿ, ಅಬ್ದುರ‌್ರಹ್ಮಾನ್ ವಂಡೇಲಾ, ಗ್ರಾಪಂ ಸದಸ್ಯರಾದ ಅನಿತಾ ಡಿಸೋಜ, ಹಮೀದ್ ಮಳಲಿ, ರುಕ್ಮಿಣಿ ಮುತ್ತೂರು, ಸಾದಿಕ್, ಸ್ಥಳೀಯರಾದ ದಾಮೋದರ್ ಕೊಟ್ಟಾರಿ, ಚಂದ್ರಹಾಸ್ ಮುತ್ತೂರು, ಅನ್ನಿ ಶೆಟ್ಟಿ, ಸಮೀರ್ ಸೂರಲ್ಪಾಡಿ, ಇಸ್ಮಾಯಿಲ್ ಶಾಂತಿನಗರ, ಅಭಿಮಾನಿ ಬಳಗದ ಅಧ್ಯಕ್ಷ ಹಲ್ಯಾರ್ ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

ಅಭಿಮಾನಿ ಬಳಗದ ಗೌರವಾಧ್ಯಕ್ಷ ಅಕ್ಬರ್ ಬಾಷಾ ಮಾಸ್ಟರ್ ಸ್ವಾಗತಿಸಿದರು. ಕಾರ್ಯದರ್ಶಿ ಹರಿಯಪ್ಪ ಮುತ್ತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News