ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2022-09-17 14:50 GMT

ಅಜೆಕಾರು : ವೈಯಕ್ತಿಕ ಕಾರಣದಿಂದ ಮನನೊಂದ ಕುಕ್ಕುಜೆ ಗ್ರಾಮದ ಪುಣಿಲ್ ಕಟ್ಟೆಯ ನಿವಾಸಿ ಕೃಷ್ಣ(29) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.16ರಂದು ಸಂಜೆ ಮನೆಯ ಮಲಗುವ ಕೋಣೆಯಲ್ಲಿ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮಾಸೆಬೈಲು: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಹೊಸಂಗಡಿ ಗ್ರಾಮದ ಅತ್ತಿಕೊಡ್ಲು ನಿವಾಸಿ ವಿನಯ್ ಕುಮಾರ್ ಶೆಟ್ಟಿ(33) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.೧೫ರಂದು ರಾತ್ರಿ ಮನೆಯ ಹತ್ತಿರವಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ವಿಪರೀತ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದ ರೆಂಜಾಳ ಪೆರಲದ್ದ ಬೆಟ್ಟು ನಿವಾಸಿ ಮಥಾಯಸ್ ಸಾಂಕ್ತಿಸ್(55) ಎಂಬವರು ಮಾನಸಿಕವಾಗಿ ಜೀವನದಲ್ಲಿನೊಂದು ಸೆ.16ರ ಮದ್ಯಾಹ್ನದಿಂದ ಸೆ.17ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News