ಸೆ.25ರಂದು 'ಭಾರತದ ಕಮ್ಯುನಿಸ್ಟ್ ಚಳವಳಿಯ ಪ್ರಾರಂಭದ ಹೆಜ್ಜೆ ಗುರುತುಗಳು' ಪುಸ್ತಕ ಬಿಡುಗಡೆ

Update: 2022-09-18 04:13 GMT

ಮಂಗಳೂರು, ಸೆ.18: ' ಭಾರತದ ಕಮ್ಯುನಿಸ್ಟ್ ಚಳವಳಿಯಲ್ಲಿ ಪ್ರಾರಂಭದ ಹೆಜ್ಜೆ ಗುರುತುಗಳು' ಎಂಬ ಚಾರಿತ್ರಿಕ ವಸ್ತು ವಿಶ್ಲೇಷಣೆಯ ಪುಸ್ತಕ ಬಿಡುಗಡೆ ಸಮಾರಂಭ ಸೆ.25ರಂದು ಬೆಳಗ್ಗೆ 10:30ಕ್ಕೆ ನಗರದ ಬಲ್ಮಠದಲ್ಲಿರುವ ಸಹೋದಯ ಹಾಲ್ ನಲ್ಲಿ ಜರುಗಲಿದೆ.

 ಪುಸ್ತಕವನ್ನು CITU ಸಂದೇಶ ಮಾಸಿಕ ಪತ್ರಿಕೆಯ ಸಂಪಾದಕ, ರಾಜ್ಯ ಕಾರ್ಮಿಕ ನಾಯಕರಾದ ಕೆ.ಮಹಾಂತೇಶ್  ಬಿಡುಗಡೆಗೊಳಿಸುವರು. CPIM ದ.ಕ. ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ನಿವೃತ್ತ ಫ್ರೊಫೆಸರ್ ಡಾ.ಕೆ.ರಾಜೇಂದ್ರ ಉಡುಪ ಪುಸ್ತಕ ಪರಿಚಯ ಮಾಡುವರು. ಮುಖ್ಯ ಅತಿಥಿಯಾಗಿ ನಿವೃತ್ತ  ಪ್ರಾಂಶುಪಾಲ ಡಾ.ಎನ್. ಇಸ್ಮಾಯೀಲ್ ಭಾಗವಹಿಸಲಿದ್ದಾರೆ .

 ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ನಾಯಕರಾದ ಮುಝಾಫರ್ ಅಹ್ಮದ್ ಬರೆದಿರುವ ಇಂಗ್ಲಿಷ್ ಆವೃತ್ತಿ ಪುಸ್ತಕವನ್ನು ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮಂಗಳೂರಿನ ಪ್ರಗತಿಪರ ಜನಸಮುದಾಯ ಪ್ರಕಾಶನವು ಪುಸ್ತಕವನ್ನು ಪ್ರಕಟಿಸಿದೆ ಎಂದು ಪ್ರಕಾಶಕ ಸುನೀಲ್ ಕುಮಾರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News