ಸೋಮೇಶ್ವರದಲ್ಲಿ ಎನ್ನೆಸ್ಸೆಸ್‌ನಿಂದ ಸ್ವಚ್ಛತಾ ಅಭಿಯಾನ
Update: 2022-09-18 18:36 IST
ಮಂಗಳೂರು : ರಾಷ್ಟ್ರೀಯ ಸೇವಾ ಯೋಜನೆ ಕೇಂದ್ರ ಪ್ರಾದೇಶಿಕ ಕಚೇರಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಬಾಗಿತ್ವದಲ್ಲಿ ಕಡಲ ತೀರ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು ಸೋಮೇಶ್ವರ ಕಡಲ ಕಿನಾರೆಯಲ್ಲಿ ಶನಿವಾರ ನಡೆಯಿತು. ಸುಮಾರು 120 ಸ್ವಯಂ ಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಮಂಗಳೂರು ಸಂಚಾರ ಉಪವಿಭಾಗದ ಎಸಿಪಿ ಗೀತಾ ಡಿ.ಕುಲಕರ್ಣಿ ಅಭಿಯಾನಕ್ಕೆ ಚಾಲನೆ ನೀಡಿದರು.
ಸಂತ ಅಲೋಶಿಯಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಆಲ್ವಿನ್, ಕ್ಯಾರೆಲ್ ಪಿರೇರಾ, ಮಂಗಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಲಾಲು ಕೃಷ್ಣ, ಸ್ಥಳೀಯ ಮುಖಂಡ ದಿನೇಶ್ ಕಾಜವ ಮತ್ತಿರರರು ಉಪಸ್ಥಿತರಿದ್ದರು.