×
Ad

ಮಳಲಿ ಶಾಲೆಯಲ್ಲಿ ಚೈಲ್ಡ್‌ಲೈನ್‌ನ ‘ತೆರೆದ ಮನೆ’ ಕಾರ್ಯಕ್ರಮ

Update: 2022-09-18 18:37 IST

ಮಂಗಳೂರು : ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ ಚೈಲ್ಡ್‌ಲೈನ್-1098 ವತಿಯಿಂದ ‘ತೆರೆದ ಮನೆ’ ಕಾರ್ಯಕ್ರಮವು ಮಳಲಿಯ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಶನಿವಾರ ನಡೆಯಿತು.

1098-ಭಿತ್ತಿಪತ್ರವನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಡಾ.ಶಶಿರೇಖಾ ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರಲಿದೆ ಎಂದರು.

ಚೈಲ್ಡ್‌ಲೈನ್‌ನ ನಗರ ಸಂಯೋಜಕ ರೋಹಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಜ್ಪೆ ಠಾಣೆಯ ಪೊಲೀಸ್ ಸಿಬ್ಬಂದಿ ಪ್ರಕಾಶ್, ಡಾ. ವಿದ್ಯಾರಶ್ಮಿ, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ್, ಗಂಜಿಮಠ ಗ್ರಾಪಂ ಉಪಾಧ್ಯಕ್ಷೆ ಕುಮುದಾ ನಾಯಕ್, ಶಾಲೆಯ ಮುಖ್ಯಶಿಕ್ಷಕಿ ಅನುರಾಧಾ ಎನ್.ಎಸ್., ಚೈಲ್ಡ್‌ಲೈನ್‌ನ ಸಂಯೋಜಕ ಗಣೇಶ್ ದೋಳ್ಪಾಡಿ, ರೇವತಿ ಉಪಸ್ಥಿತರಿದ್ದರು.

ಶಿಕ್ಷಕ ಶ್ರೀಪತಿ ಸ್ವಾಗತಿಸಿದರು. ಜಯಂತಿ ಕೋಕಳ ವಂದಿಸಿದರು. ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News