×
Ad

ಆಂಜೆಲೋರ್ ಚರ್ಚ್ ಘಟಕದ ವಾರ್ಷಿಕ ಹಬ್ಬ

Update: 2022-09-18 18:41 IST

ಮಂಗಳೂರು, ಸೆ.18: ಸಂತ ವಿನ್ಸೆಂಟ್ ಪಾವ್ಲ್ ಸಭಾ ಆಂಜೆಲೋರ್ ಚರ್ಚ್ ಘಟಕದ ವಾರ್ಷಿಕ ಹಬ್ಬವು ರವಿವಾರ ನಡೆಯಿತು.

ಚರ್ಚ್ ಧರ್ಮಗುರು ಫಾ. ವಿಲಿಯಂ ಮಿನೇಜಸ್ ಬಲಿಪೂಜೆಯ ವೇಳೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂತ ವಿನ್ಸೆಂಟ್ ಪಾವ್ಲ್ ಸಭಾ ಘಟಕವು ಈ ವರ್ಷ ಮೂರು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಯೋಜನೆ ಹಮ್ಮಿ ಕೊಂಡಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಗಳಾಗಿ ನಿವೃತ್ತ ಮುಖ್ಯ ಶಿಕ್ಷಕಿ ಫಿಲೋಮಿನಾ ತಾವ್ರೊ, ಗಾಯಕ ಮೆಲ್ವಿನ್ ಪೆರಿಸ್ ಭಾಗವಹಿಸಿ ದ್ದರು. ವೇದಿಕೆಯಲ್ಲಿ ಸಂತ ವಿನ್ಸೆಂಟ್ ಪಾವ್ಲ್ ಸಭಾದ ಪ್ರಾಂತೀಯ ಅಧ್ಯಕ್ಷ ಜಾರ್ಜ್ ಬೋರೋಮಿಯಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ  ನೋಯೆಲ್ ಪಿಂಟೋ, ಕಾರ್ಯದರ್ಶಿ ಲೋಲಿನಾ ಡಿಸೋಜ, ಸಭಾದ ಸ್ಥಳೀಯ ಅಧ್ಯಕ್ಷ ಐವನ್ ಡಿಸಿಲ್ವಾ ಉಪಸ್ಥಿತರಿದ್ದರು.

ಬರ್ನಾಡ್  ಡಿಸೋಜ ವಂದಿಸಿದರು. ಸಿಂತಿಯಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News