ಸೆ.25: ಪುಸ್ತಕ ಬಿಡುಗಡೆ
ಮಂಗಳೂರು: ಭಾರತದ ಕಮ್ಯುನಿಸ್ಟ್ ಚಳುವಳಿಯ ಪ್ರಾರಂಭದ ಹೆಜ್ಜೆ ಗುರುತುಗಳು ಎಂಬ ಚಾರಿತ್ರಿಕ ವಸ್ತು ವಿಶ್ಲೇಷಣೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಸೆ.25ರಂದು ಬೆಳಗ್ಗೆ 10.30ಕ್ಕೆ ನಗರದ ಬಲ್ಮಠದಲ್ಲಿರುವ ಸಹೋದಯ ಹಾಲ್‌ನಲ್ಲಿ ಜರಗಲಿದೆ.
ಸಿಐಟಿಯು ಸಂದೇಶ ಮಾಸಿಕದ ಸಂಪಾದಕ ಹಾಗೂ ರಾಜ್ಯ ಕಾರ್ಮಿಕ ನಾಯಕ ಕೆ.ಮಹಾಂತೇಶ್ ಪುಸ್ತಕ ಬಿಡುಗಡೆಗೊಳಿಸುವರು. ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರೊ.ಫೆಸರ್ ಡಾ.ಕೆ.ರಾಜೇಂದ್ರ ಉಡುಪ ಪುಸ್ತಕ ಪರಿಚಯ ಮಾಡಲಿದ್ದಾರೆ. ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಡಾ.ಎನ್. ಇಸ್ಮಾಯೀಲ್ ಭಾಗವಹಿಸಲಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮುಝಾಫರ್ ಅಹ್ಮದ್ ಬರೆದಿರುವ ಇಂಗ್ಲಿಷ್ ಆವೃತ್ತಿಯ ಈ ಪುಸ್ತಕವನ್ನು ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ ಕನ್ನಡಕ್ಕೆ ಅನುವಾದಿಸಿದ್ದು, ಮಂಗಳೂರಿನ ಪ್ರಗತಿಪರ ಜನಸಮುದಾಯ ಪ್ರಕಾಶನವು ಪುಸ್ತಕವನ್ನು ಪ್ರಕಟಿಸಿದೆ ಎಂದು ಪ್ರಕಾಶಕ ಸುನೀಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.