ಎ.ಕೆ. ಕುಕ್ಕಿಲ ಅವರ ’ಅವಳು’ ಕೃತಿ ಬಿಡುಗಡೆ

Update: 2022-09-18 18:02 GMT

ವಿಟ್ಲ: ಸೆ.18: ಸನ್ಮಾರ್ಗ ಪತ್ರಿಕೆಯ ಸಂಪಾದಕ ಎ.ಕೆ. ಕುಕ್ಕಿಲ ಅವರ ಹತ್ತನೇ ಕೃತಿ ‘ಅವಳುʼ (ಲಲಿತ ಪ್ರಬಂಧ ಸಂಕಲನ)ವನ್ನು ನಿವೃತ್ತ ಶಿಕ್ಷಕಿ ಸುಶೀಲಾ ಟೀಚರ್ ರವಿವಾರ ಬಿಡುಗಡೆಗೊಳಿಸಿದರು.

ಸುಶೀಲಾ ಟೀಚರ್‌ರ ಕೈಂತಿಲದಲ್ಲಿರುವ ಮನೆಯಲ್ಲಿ ಕುಕ್ಕಿಲ ಮತ್ತು ಸುಶೀಲಾ ಕುಟುಂಬಗಳ ಸದಸ್ಯರ ಸಮ್ಮುಖ ಬಿಡುಗಡೆಗೊಳಿಸಲಾಯಿತು.

ತನಗೆ ಅ ಆ ಇ ಈ ಕಲಿಸಿದ ಶಿಕ್ಷಕಿ ಸುಶೀಲಾ ಟೀಚರ್‌ರ ಅಂದಿನ ದಿನಗಳನ್ನು ಸ್ಮರಿಸಿಕೊಂಡ ಎ.ಕೆ. ಕುಕ್ಕಿಲ  ತಾನು ಇವತ್ತು ಈ ಹಂತಕ್ಕೆ ಬೆಳೆದಿದ್ದರೆ ಅದರಲ್ಲಿ ಟೀಚರ್‌ರ ಪಾತ್ರ ಬಹುದೊಡ್ಡದು ಎಂದು ಸ್ಮರಿಸಿದರು.

ಶಿಷ್ಯನೋರ್ವ ತನ್ನ ಶಿಕ್ಷಕಿಯನ್ನು ನೆನಪಿಸಿಕೊಂಡು ಅವರ ಮನೆಗೆ ಬರುವುದು ಶಿಕ್ಷಕಿಗೆ ಕೊಡುವ ಬಹಳ ದೊಡ್ಡ ಗೌರವ. ಯಾವುದೇ ಶಿಕ್ಷಕಿಗೆ ಇಂಥ ಸಂದರ್ಭಗಳು ವಿಶೇಷ ಅಭಿಮಾನದ ಘಳಿಗೆಯಾಗಿರುತ್ತದೆ ಎಂದು ಸುಶೀಲ ಟೀಚರ್‌ರ ಸಂಬಂಧಿ ಹೊನ್ನಮ್ಮ ಖುಷಿ ಹಂಚಿಕೊಂಡರು.

ಈ ಸಂದರ್ಭ ಸುಶೀಲಾ ಟೀಚರ್‌ರ ಪುತ್ರ ಕರುಣಾಕರ, ಅಳಿಯ ದಿನೇಶ್ ಅನಂತಾಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News