ಹೌದಿ ಬಂಡುಕೋರರಿಂದ 7,500 ಮಕ್ಕಳ ಹತ್ಯೆ; ವರದಿ

Update: 2022-09-18 18:19 GMT

ಅಡೆನ್, ಸೆ.18: ಹೌದಿ ಬಂಡುಕೋರರು ಯೆಮನ್‌ನಲ್ಲಿ 2014ರಲ್ಲಿ ಅಂತರ್ಯುದ್ಧ ಪ್ರಾರಂಭಗೊಂಡಂದಿನಿಂದ 7,500 ಮಕ್ಕಳನ್ನು ಹತ್ಯೆ ಮಾಡಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ವರದಿ ನೀಡಿದೆ.

ಯೆಮನ್‌ನ ತಯಿರ್ ನಗರದಲ್ಲಿ 1,100 ಸೇರಿದಂತೆ ಒಟ್ಟು 7,500 ಮಕ್ಕಳ ಹತ್ಯೆಯ ಬಗ್ಗೆ ದಾಖಲೆ ಸಂಗ್ರಹಿಸಲಾಗಿದೆ. ಈ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಲೆ, ಆಸ್ಪತ್ರೆಗಳು, ಮಾರುಕಟ್ಟೆಗಳು, ಆಟದ ಮೈದಾನಗಳಿದ್ದು ಶೆಲ್ ದಾಳಿಯಿಂದ 8,310 ಮಕ್ಕಳು ಗಾಯಗೊಂಡಿದ್ದಾರೆ ಎಂದು ಮನವ ಹಕ್ಕುಗಳ ಸಂಘಟನೆಯ ಪ್ರತಿನಿಧಿಗಳು ಹೇಳಿದ್ದಾರೆ.

ತಯೀರ್ ನಗರದ ಮೇಲಿನ ಮುತ್ತಿಗೆ ಅಂತ್ಯಗೊಳಿಸುವಂತೆ ಹಾಗೂ ಯೆಮನ್ ಜನತೆಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್ ಬೆಂಬಲಿತ ಹೌದಿಗಳ ಮೇಲೆ ಒತ್ತಡ ಹೇರುವಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯನ್ನು ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News