×
Ad

ಹೆಂಡತಿಯರ ಹಿಂಸೆಯಿಂದ ಕಂಗೆಟ್ಟಿರುವ ಗಂಡಂದಿರು!

Update: 2022-09-19 12:42 IST

ಹೆಂಡತಿಯರ ವಿರುದ್ಧ ಪುರುಷರು ನಡೆಸುವ ದೈಹಿಕ, ಲೈಂಗಿಕ ಮತ್ತು ಮಾನಸಿಕ ಹಿಂಸೆಯ ರೀತಿಯಲ್ಲೇ, ಹೆಂಡತಿಯರೂ ಗಂಡಂದಿರ ಮೇಲೆ ದೈಹಿಕ ಹಿಂಸೆ ನಡೆಸಿರುವುದನ್ನು ಭಾರತೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 (ಎನ್‌ಎಫ್‌ಎಚ್‌ಎಸ್-5) ದಾಖಲಿಸಿದೆ.

ಹಲವು ಮಹಿಳೆಯರು ತಮ್ಮ ಹಾಲಿ ಅಥವಾ ಮಾಜಿ ಗಂಡಂದಿರಿಗೆ ಹೊಡೆದಿದ್ದಾರೆ, ಕೆನ್ನೆಗೆ ಬಾರಿಸಿದ್ದಾರೆ ಅಥವಾ ದೈಹಿಕ ವಾಗಿ ಘಾಸಿಗೊಳಿಸುವಂಥ ಕೃತ್ಯಗಳನ್ನು ನಡೆಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಗಂಡಂದಿರು ಹೊಡೆಯದಿದ್ದರೂ ಅವರು ಹೊಡೆದಿದ್ದಾರೆ ಎಂದಿದೆ.

ಶೇ.4 ಮಹಿಳೆಯರು ಗಂಡಂದಿರಿಗೆ ಹೊಡೆಯುತ್ತಾರೆ

18-49 ವರ್ಷ ವಯೋಗುಂಪಿನ ಮಹಿಳೆಯರ ಪೈಕಿ ಶೇ.4 ಮಂದಿ ತಮ್ಮ ಗಂಡಂದಿರಿಗೆ ಹೊಡೆಯುತ್ತಾರೆ. ಆದರೆ ಗಂಡಂದಿರು ಪ್ರತಿಯಾಗಿ ಹೊಡೆಯುವುದಿಲ್ಲ. ಸಮೀಕ್ಷೆಗಿಂತ ಮೊದಲಿನ 12 ತಿಂಗಳುಗಳ ಅವಧಿಯಲ್ಲಿ ಶೇ.3 ವಿವಾಹಿತ ಮಹಿಳೆಯರು ಗಂಡಂದಿರಿಗೆ ಹೊಡೆದಿದ್ದಾರೆ.

ಗಂಡನಿಂದ ಹಿಂಸೆ ಅನುಭವಿಸದ ಮಹಿಳೆಯರಿಗೆ ಹೋಲಿಸಿ ದರೆ, (ಹಾಲಿ ಅಥವಾ ಹಿಂದಿನ) ಗಂಡನಿಂದ ಹಿಂಸೆಗೆ ಒಳಗಾದ ಮಹಿಳೆಯರು ಗಂಡಂದಿರಿಗೆ ಹೊಡೆಯುವ ಪ್ರಮಾಣ ಅಧಿಕವಾಗಿದೆ. ಹಿಂದೆ ಯಾವತ್ತಾದರೂ ಗಂಡಂದಿರಿಂದ ಹಿಂಸೆ ಅನುಭವಿಸಿದ ಮಹಿಳೆಯರ ಪೈಕಿ ಶೇ.10 ಮಂದಿ ಗಂಡನಿಗೆ ಹೊಡೆದರೆ, ಹಿಂದೆ ಯಾವತ್ತೂ ಗಂಡಂದಿರಿಂದ ಹಿಂಸೆಗೆ ಒಳಗಾಗದ ಮಹಿಳೆಯರ ಪೈಕಿ ಒಂದು ಶೇಕಡ ಮಹಿಳೆಯರು ಗಂಡಂದಿರಿಗೆ ಹೊಡೆದಿದ್ದಾರೆ.

Writer - ಆರ್‌ಎಚ್

contributor

Editor - ಆರ್‌ಎಚ್

contributor

Similar News