ಅಕ್ರಮ ಅನ್ನಭಾಗ್ಯದ ಅಕ್ಕಿ ಸಾಗಾಟ ಆರೋಪ : ಇಬ್ಬರ ಬಂಧನ

Update: 2022-09-19 15:24 GMT

ಗಂಗೊಳ್ಳಿ, ಸೆ.19: ಕಾರಿನಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಇಬ್ಬರನ್ನು ಆಹಾರ ನಿರೀಕ್ಷಕರ ತಂಡ ಸೆ.19ರಂದು ಬೆಳಗ್ಗೆ ತ್ರಾಸಿ ಗ್ರಾಮದ ಮೋವಾಡಿ ಗಾಣದಮಕ್ಕಿ ಕ್ರಾಸ್ ಬಳಿ ಬಂಧಿಸಿದೆ.

ಕೋಡಿಯ ಅಶ್ರಫ್ ಬ್ಯಾರಿ ಹಾಗೂ ರಜಬ್ ಬಂಧಿತ ಆರೋಪಿಗಳು.

ನಾಡ ಕಡೆಯಿಂದ ತ್ರಾಸಿ ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ನೇತೃತ್ವದ ತಂಡ ದಾಳಿ ನಡೆಸಿದೆ.

ಕಾರಿನಲ್ಲಿದ್ದ 15,400ರೂ. ಮೌಲ್ಯದ ಒಟ್ಟು 14 ಚೀಲಗಳಲ್ಲಿ ತುಂಬಿದ್ದ 700 ಕೆ.ಜಿ ಬೆಳ್ತಿಗೆ ಅಕ್ಕಿ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಅಕ್ಕಿಯನ್ನು ಜನರಿಂದ ಖರೀದಿಸಿ ಹೆಚ್ಚಿನ ಬೆಲೆಗೆ ಅಂಗಡಿ ಮಾರಾಟ ಮಾಡಲು ಸಾಗಿಸುತ್ತಿದ್ದರೆನ್ನಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News