ಮಂಜನಾಡಿ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಿರ್ಮಿಸಲಾದ ಶೌಚಾಲಯ, ಕಂಪೌಂಡ್ ಉದ್ಘಾಟನೆ

Update: 2022-09-20 05:59 GMT

ಉಳ್ಳಾಲ: ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಮಂಜನಾಡಿ ಕೇಂದ್ರ ಜುಮಾ ಮಸೀದಿ ಹಝ್ರತ್ ಇಸ್ಮಾಯಿಲ್ ವಲಿಯುಲ್ಲಾ ದರ್ಗಾ ವಠಾರದಲ್ಲಿ ನಿರ್ಮಿಸಲಾದ  ಶೌಚಾಲಯ ಹಾಗೂ ಕಂಪೌಂಡ್ ಅನ್ನು ರಾಜ್ಯ ವಿಪಕ್ಷ ಉಪನಾಯಕ ಯು.ಟಿ ಖಾದರ್  ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು,  ಮಂಜನಾಡಿ ಮಸೀದಿಯ ವಠಾರದಲ್ಲಿ ಆದ ಅಭಿವೃದ್ಧಿ ಕಾರ್ಯಗಳಿಂದ  ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಸೀದಿಯನ್ನು ಬೆಳಗಿಸಲು ಸಾಧ್ಯವಾಗಿದೆ. ಸ್ಥಳೀಯ ಜನರ ಒಗ್ಗಟ್ಟು,  ಸಹಕಾರ, ಪ್ರೋತ್ಸಾಹದಿಂದ ಕಾಮಗಾರಿಗಳು ಪೂರ್ಣಗೊಂಡಿದೆ.  ಅನುದಾನ ಬಿಡುಗಡೆಗೊಳಿಸುವುದು ಸರಕಾರವಾದರೂ, ಅನುಷ್ಠಾನಕ್ಕೆ ತರುವವರು ಸ್ಥಳೀಯರು, ಅವರೆಲ್ಲರ ಆಶೀರ್ವಾದ ಹಾಗೂ ದುಆದಿಂದ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ದುಅ ನೆರವೇರಿಸಿದರು. ಮಂಜನಾಡಿ‌ ಕೇಂದ್ರ ಜುಮಾ‌ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವಾ, ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್ ಪಾರ್ತಿಪ್ಪಾಡಿ, ಜೊತೆ ಕಾರ್ಯದರ್ಶಿಗಳಾದ ಎನ್.ಐ ಮೊಹಮ್ಮದ್, ಹಮೀದ್ ಆರಂಗಡಿ, ಬಾಪಕುಂಞ,  ಉಪಾಧ್ಯಕ್ಷರಾದ ಎನ್.ಎಸ್ ಕರೀಂ ಹಾಜಿ, ಕೋಶಾಧಿಕಾರಿ ಮೊದ್ದೀನ್ ಹಾಜಿ ಬಸರ, ಮಾಜಿ ಅಧ್ಯಕ್ಷ ಅಲಿ‌‌ ಕುಂಞ ಹಾಜಿ‌ ಪಾರೆ, ಸದಸ್ಯ ಕಲ್ಕಟ್ಟ ರಝ್ವಿ, ಇಬ್ರಾಹಿಂ ಅಹ್ಸನಿ, ಇಝ್ಝುದ್ದೀನ್ ಮಾಸ್ಟರ್, ಉಮರ್ ಮೋರ್ಲ, ಟಿ. ಕುಂಞ, ಎನ್.ಕೆ ಬಾವ, ಕುಂಞಬಾವ ಕಟ್ಟೆಮಾರ್, ಇಬ್ರಾಹೀಂ ಎ.ಇ, ಮಂಗಳೂರು‌ ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಂಜನಾಡಿ ಗ್ರಾ.ಪಂ ಉಪಾಧ್ಯಕ್ಷ ವಿನ್ಸೆಟ್, ಸದಸ್ಯರಾದ ಮಂಗಳಾಂತಿ ಬಾವ, ಅತ್ತಾವುಲ್ಲಾ ಪಾರ್ತಿಪ್ಪಾಡಿ, ಬಶೀರ್ ಆರಂಗಡಿ, ಅಬ್ದುಲ್ ಖಾದರ್ ಕಲ್ಕಟ್ಟ, ಗುತ್ತಿಗೆದಾರ ಶಾಹುಲ್ ಹಮೀದ್  ಉಪಸ್ಥಿತರಿದರು‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News