ದ.ಕ.ಜಿಲ್ಲಾ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದಿಂದ ಸನ್ಮಾನ
ಮಂಗಳೂರು, ಸೆ.20: ಪತ್ರಕರ್ತರ ಮೂಲಕ ಸ್ಥಾಪನೆಯಾದ ಗೃಹ ನಿರ್ಮಾಣ ಸಹಕಾರಿ ಸಂಘ ಮಾದರಿ ಸಂಸ್ಥೆ ಯಾಗಿ ಬೆಳೆಯುವಂತಾಗಲಿ ಎಂದು ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ನಾಯಕ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದ ಮಹಾಸಭೆಯ ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸಂದರ್ಭ ಜಿಲ್ಲೆಯಲ್ಲಿ ಆನ್‌ಲೈನ್ ಮೂಲಕ ಸಹಕಾರಿ ಸಂಘಗಳ ನೋಂದಣಿ ಆರಂಭಗೊಂಡಿತು. ಈ ಸಂದರ್ಭ ರಾಜ್ಯದಲ್ಲೇ ಪ್ರಥಮವಾಗಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘ ನೋಂದಣಿಯಾಗಿದೆ. ಸಹಕಾರಿ ಸಂಘ ವನ್ನು ಉತ್ತಮವಾಗಿ ಬೆಳೆಸಲು ಪರಿಶ್ರಮ ಮುಖ್ಯವಾಗಿದೆ ಎಂದರು.
ದ.ಕ. ಜಿಲ್ಲಾ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಕೇಶವ ಕುಂದರ್, ಪುಷ್ಪರಾಜ್ ಬಿ.ಎನ್, ಇಬ್ರಾಹೀಂ ಅಡ್ಕಸ್ಥಳ, ಮುಹಮ್ಮದ್ ಆರಿಫ್ ಪಡುಬಿದ್ರಿ, ಜಿತೇಂದ್ರ ಕುಂದೇಶ್ವರ, ಆತ್ಮಭೂಷಣ್, ಸತ್ಯಾವತಿ, ವಿಲ್ಫೆಡ್ ಡಿಸೋಜ, ವಿಜಯ ಕೋಟ್ಯಾನ್ ಪಡು, ಸುಖ್‌ಪಾಲ್ ಪೊಳಲಿ, ಸುರೇಶ್ ಡಿ. ಪಳ್ಳಿ, ಹರೀಶ್ ಮೋಟುಕಾನ, ಶಿಲ್ಪಾಕುಮಾರಿ ಉಪಸ್ಥಿತರಿದ್ದರು.
ಕಾರ್ಯನಿರ್ವಹಣಾಧಿಕಾರಿ ಅಭಿಷೇಕ್ ಸಂಘದ ಲೆಕ್ಕ ಪತ್ರ ಮಡಿಸಿದರು.ಉಪಾಧ್ಯಕ್ಷ ಭಾಸ್ಕರ್ ರೈ ವಂದಿಸಿದರು.