ಕಾಪು : ಬಿಪಿಎಲ್ ಕಾರ್ಡ್‍ದಾರರಿಗೆ ನಾಟಿ ಕೋಳಿ ವಿತರಣೆ

Update: 2022-09-20 16:10 GMT

ಕಾಪು : ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ರೈತ ಮಹಿಳೆಯರಿಗೆ ನಾಟಿ ಕೋಳಿ ವಿತರಿಸುವ ಕಾರ್ಯಕ್ರಮವು ಕಾಪು ಪಶು ಆಸ್ಪತ್ರೆಯಲ್ಲಿ ಮಂಗಳವಾರ ನಡೆಯಿತು.

ಕಾಪು ಕರ್ನಾಟಕ ಸರ್ಕಾರ ಕುಕ್ಕುಟ ಮಹಾಮಂಡಳಿ ಬೆಂಗಳೂರು ಇವರ ವತಿಯಿಂದ ಪಶು ಸಂಗೋಪನಾ ಇಲಾಖೆಯ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮವನ್ನು ಕಾಪು ತಾಲೂಕು ಪಶು ವೈದ್ಯಾಧಿಕಾರಿ ಡಾ. ಅರುಣ್ ಹೆಗ್ಡೆ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಕಾಪು ತಾಲೂಕಿನ 106 ಮಂದಿ ಫಲಾನುಭವಿಗಳಿಗೆ ತಲಾ 20ರಂತೆ ನಾಟಿ ಕೋಳಿ ವಿತರಿಸಲಾಗುತ್ತಿದೆ. ಈ ಯೋಜನೆಯ ಮೂಲಕವಾಗಿ ಗ್ರಾಮೀಣ ರೈತ ಮಹಿಳೆಯರನ್ನು ಆರ್ಥಿಕವಾಗಿ ಬಲವಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಕರ್ನಾಟಕ ಕುಕ್ಕುಟ ಮಹಾಮಂಡಳಿಯ ಜಾನುವಾರು ಅಧಿಕಾರಿ ಅನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 25,000 ಗ್ರಾಮೀಣ ರೈತ ಮಹಿಳೆಯರಿಗೆ 5 ಲಕ್ಷ ನಾಟಿ ಕೋಳಿ ಮರಿಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಪ್ರತೀ ತಾಲೂಕಿನ 106 ಫಲಾನುಭವಿಗಳಿಗೆ ಕೋಳಿ ಮರಿ ವಿತರಿಸಲಾಗುತ್ತಿದೆ ಎಂದರು.

ಕಟಪಾಡಿ ಪಶು ವೈದ್ಯಕೀಯ ಕೇಂದ್ರದ ಹಿರಿಯ ಪಶು ವೈದ್ಯಾಧಿಕಾರಿ  ಡಾ. ವಿಜಯಕುಮಾರ್, ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ವಸಂತ ಮಾದರ,  ಶಿವ ಪುತ್ರಯ್ಯ ಗುರುಸ್ವಾಮಿ, ಸಹಾಯಕ ಸಿಬಂದಿಗಳಾದ ಜಯೇಶ್, ಧನವತಿ, ಪೂಜಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News