ಟರ್ಕಿಗೆ ರಾಯಭಾರಿ ನೇಮಿಸಿದ ಇಸ್ರೇಲ್

Update: 2022-09-20 18:18 GMT

ಜೆರುಸಲೇಂ, ಸೆ.20: ಕಳೆದ 4 ವರ್ಷದಲ್ಲಿ ಮೊದಲ ಬಾರಿಗೆ ಟರ್ಕಿಗೆ ತನ್ನ ರಾಯಭಾರಿಯನ್ನು ಇಸ್ರೇಲ್ ನೇಮಕ ಮಾಡಿದೆ ಎಂದು ವರದಿಯಾಗಿದೆ. 2 ವರ್ಷದಿಂದ ಟರ್ಕಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಹಿರಿಯ ರಾಜತಾಂತ್ರಿಕ ಅಧಿಕಾರಿಯಾಗಿದ್ದ ಇರಿತ್ ಲಿಲಿಯನ್ ಇನ್ನು ಮುಂದೆ ಟರ್ಕಿಗೆ ಇಸ್ರೇಲ್ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಇಸ್ರೇಲ್‌ನ ವಿದೇಶಾಂಗ ಇಲಾಖೆ ಸೋಮವಾರ ಘೋಷಿಸಿದೆ. ಗಾಝಾ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವು ಪೆಲೆಸ್ತೀನಿಯರನ್ನು ಇಸ್ರೇಲ್ ಸೇನೆ ಹತ್ಯೆ ನಡೆಸಿದ್ದ ಹಿನ್ನೆಲೆಯಲ್ಲಿ 2018ರಲ್ಲಿ ಇಸ್ರೇಲ್‌ನಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿದ್ದ ಟರ್ಕಿ, ದೇಶ ಬಿಟ್ಟು ತೆರಳುವಂತೆ ಇಸ್ರೇಲ್ ರಾಯಭಾರಿಗೆ ಸೂಚಿಸಿತ್ತು. ಬಳಿಕ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಾದೇಶಿಕ ಮೈತ್ರಿಗಳು ಬದಲಾದ ಹಿನ್ನೆಲೆಯಲ್ಲಿ ಇಸ್ರೇಲ್-ಟರ್ಕಿ ನಡುವಿನ ಸಂಬಂಧ ಸುಧಾರಣೆಗೆ ಉಭಯ ದೇಶಗಳ ಮುಖಂಡರು ಪ್ರಯತ್ನ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News