ಈಜು ಸ್ಪರ್ಧೆ: ದೃಶಾನ್ ರಾಜ್ಯಮಟ್ಟಕ್ಕೆ ಆಯ್ಕೆ
Update: 2022-09-21 11:20 IST
ಉಡುಪಿ, ಸೆ.21: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮುಕುಂದ ಕೃಷ್ಣ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಅಜ್ಜರಕಾಡು ಸರಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ದೃಶಾನ್ 50 ಮೀ ಬ್ಯಾಕ್ ಸ್ಟೋಕ್‌ನಲ್ಲಿ ಪ್ರಥಮ, 100 ಮೀ ಬಟರ್ ಪ್ಲೈನಲ್ಲಿ ಪ್ರಥಮ, 100 ಮೀ ಫ್ರೀಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾರೆ.
ಈ ಮೂಲಕ ದೃಶಾನ್ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ಇವರು ಕಿದಿಯೂರಿನ ಪಿತಾಂಬರ್‌ನಾಥ ಮತ್ತು ಭಾನುಮತಿ ದಂಪತಿ ಪುತ್ರನಾಗಿದ್ದು, ಈಜುಪಟು ಗಂಗಾಧರ್ ಜಿ. ಕಡಕಾರ್ ಅವರಲ್ಲಿ ತರಬೇತಿ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.