ಮಂಗಳೂರು: ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಮೂವರು ವಿದ್ಯಾರ್ಥಿನಿಯರು ನಾಪತ್ತೆ

Update: 2022-09-21 08:08 GMT

ಮಂಗಳೂರು, ಸೆ. 21: ಖಾಸಗಿ ಪಿಯು ಕಾಲೇಜೊಂದರ ಹಾಸ್ಟೆಲ್‌ನಿಂದ ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.  

ನಗರದ ಮೇರಿಹಿಲ್ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಸಮೀಪ ಇರುವ ಕಾಲೇಜೊಂದರ ಹಾಸ್ಟೆಲ್‌ನಿಂದ ಮೂರು ಮಂದಿ ವಿದ್ಯಾರ್ಥಿನಿಯರು ತಪ್ಪಿಸಿಕೊಂಡಿರುವುದಾಗಿ ಹೇಳಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾಲೇಜಿನ ಸಮೀಪವೇ ಹಾಸ್ಟೆಲ್ ಕೂಡಾ ಹೊಂದಿದೆ. ಈ ಹಾಸ್ಟೆಲ್‌ನ ಕಿಟಕಿ ಸಲಾಕೆಗಳ ಮೂಲಕ ಮೂರು ಮಂದಿ ವಿದ್ಯಾರ್ಥಿನಿಯರು ತಪ್ಪಿಸಿಕೊಂಡಿದ್ದಾರೆನ್ನಲಾಗಿದೆ.

ತಮ್ಮ ಬಟ್ಟೆ ಬರೆ ಬ್ಯಾಗ್‌ಗಳೊಂದಿಗೆ ಈ ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ತಪ್ಪಿಸಿಕೊಂಡಿದ್ದಾರೆನ್ನಲಾಗಿದ್ದು, ಈ ಬಗ್ಗೆ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ.

ಇದನ್ನೂ ಓದಿ: ಕೋಲಾರ | ದೇವರ ಮೂರ್ತಿ ಮುಟ್ಟಿದ ದಲಿತ ಬಾಲಕ: 60 ಸಾವಿರ ರೂ. ದಂಡ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News