ಪತ್ನಿಯಿಂದು ಸುಳ್ಳು ಕೇಸು ದಾಖಲಿಸಿ ಕಿರುಕುಳ: ಆರೋಪ
ಉಡುಪಿ, ಸೆ.21: ‘ಪತ್ನಿ ಅಮೀನಾ ಮಗಳು ಮತ್ತು ಅಳಿಯ ನನ್ನ ವಿರುದ್ಧ ನಿರಂತರ ಸುಳ್ಳು ಕೇಸುಗಳನ್ನು ನೀಡಿ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ’ ಎಂದು ಶಿರ್ವ ಗ್ರೀನ್ ಲೇಔಟ್‌ನ ಸನಾವುಲ್ಲ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರೆಲ್ಲ ಸಮಾನ ಉದ್ದೇಶದಿಂದ ಅಕ್ರಮ ಕೂಟ ಕಟ್ಟಿಕೊಂಡು 2021ರ ಸೆ.6 ರಂದು ನನಗೆ ಮೋಸ ಮಾಡಲು ಹಲವು ಕಾಗದ ಪತ್ರಗಳಿಗೆ ಸಹಿ ಮಾಡು ವಂತೆ ಬೆದರಿಸಿದ್ದಾರೆ. ಸುಳ್ಳು ಕೇಸು ದಾಖಲಿಸಿ ಹೆದರಿಸಿ ಸಹಿ ಪಡೆದಿದ್ದಾರೆ. ನಂತರ ಮನೆಗೆ ಬಂದರೆ ಕೊಂದು ಮುಗಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ನಾನು ದುಡಿದು ಕಟ್ಟಿದ ಮನೆಯಲ್ಲಿ ನನ್ನ ಪತ್ನಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ದೂರಿದರು.
ಮಗಳ ಮದುವೆಗೆ ಮನೆ ಅಡವಿಟ್ಟು ನೀಡಿದ ಹಣ ವಾಪಾಸ್ಸು ಕೇಳಿದಕ್ಕೆ ಎಲ್ಲ ಸೇರಿ ಹಲ್ಲೆ ನಡೆಸಿದ್ದಾರೆ. ಮನೆಯ ಎಲ್ಲ ಸೊತ್ತುಗಳನ್ನು ಸಾಗಿಸುವುದನ್ನು ಪ್ರಶ್ನಿಸಿದಕ್ಕೆ ನನ್ನ ಹಾಗೂ ನನ್ನ ಕುಟುಂಬದವರ ವಿರುದ್ಧ ವಿನಾಕಾರಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮದುವೆಯಾಗಿ 30ವರ್ಷಗಳಾದ ಬಳಿಕ ವರದಕ್ಷಿಣೆ ಕಿರುಕುಳ ದೂರು ನೀಡಿ ಸತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶೌಕತ್, ಅತ್ತೇರಿ, ಹಸೈನಾರ್ ಉಪಸ್ಥಿತರಿದ್ದರು.