ಉಡುಪಿ: ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಸೆರೆ

Update: 2022-09-21 15:57 GMT

ಉಡುಪಿ, ಸೆ.21: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಮುದ್ರಾಡಿ ಸಮೀಪದ ಬಚ್ಚಪ್ಪು ನಿವಾಸಿ ಗಣೇಶ್ ಶೆಟ್ಟಿಗಾರ್ (23) ಬಂಧಿತ ಆರೋಪಿ.

ಈತ ತನ್ನ ದೂರದ ಸಂಬಂಧಿ 16ರ ಹರೆಯದ ಬಾಲಕಿಯನ್ನು ಜು.30ರಂದು ತನ್ನ ಮನೆಯಲ್ಲಿ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆಂದು ಆಕೆಯ ಮನೆಯವರು ದೂರಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News