ಮಲ್ಪೆ: ನಾಡದೋಣಿ ಬಲೆಗೆ ಬಿದ್ದ ಮಿಲ್ಕ್ ತಾಟೆ ಮೀನುಗಳು!

Update: 2022-09-21 16:04 GMT

ಮಲ್ಪೆ, ಸೆ.21: ಮಲ್ಪೆ ಮಿನುಗಾರಿಕೆ ಬಂದರಿನಲ್ಲಿ ಸಣ್ಣ ನಾಡದೋಣಿಯ ಬಲೆಗೆ ಕೆಬಿತಾಟೆ(ಮಿಲ್ಕ್ ತಾಟೆ) ಮೀನುಗಳು ಬಿದ್ದಿವೆ.

ಎರಡರಿಂದ ಮೂರು ಕೆಜಿ ತೂಕುವ ಸುಮಾರು 100 ತಾಟೆ ಮೀನುಗಳನ್ನು ದಕ್ಕೆಯ ಹರಾಜು ಪ್ರಾಂಗಣದಲ್ಲಿ ಹರಡಿ ಇಡಲಾಗಿತ್ತು. ಕೆ.ಜಿ.ಗೆ 280ರೂ. ನಂತೆ ಹರಾಜಿನಲ್ಲಿ ವ್ಯಾಪಾರಿಗಳಿಗೆ ಮಾರಾಟವಾಗಿದೆ. ಈ ಮೀನು ಕೇರಳಕ್ಕೆ ಹೆಚ್ಚಾಗಿ ರವಾನೆಯಾಗುತ್ತದೆ. ಇದರ ಕಿವಿ ಮತ್ತು ರೆಕ್ಕೆಗಳಿಗೆ ಭಾರಿ ಬೇಡಿಕೆ ಇದ್ದು, ಇದರ ವೈಜ್ಞಾನಿಕ ಹೆಸರು ಬ್ಲಾಕ್‌ ಟಿಪ್ ರೀಫ್ ಶಾರ್ಕ್ ಎಂಬುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News