ಪೋಲಿಸ್ ದೌರ್ಜನ್ಯ ಆರೋಪ: ಅಕ್ಷತಾ ಪೂಜಾರಿ ಮನೆಗೆ ಸಿಪಿಎಂ ಜಿಲ್ಲಾ ನಿಯೋಗ ಭೇಟಿ
Update: 2025-12-18 22:11 IST
ಬ್ರಹ್ಮಾವರ: ಉಪ್ಪೂರು ಜಾತಾಬೆಟ್ಟು ನಿವಾಸಿ ಅಕ್ಷತಾ ಪೂಜಾರಿ ಎಂಬವರ ಮನೆಗೆ ಪೋಲಿಸರು ನುಗ್ಗಿ ಭಯಪಡಿಸಿ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆಕೆಯ ಮನೆಗೆ ಸಿಪಿಎಂ ಜಿಲ್ಲಾ ಸಮಿತಿ ನಿಯೋಗ ಭೇಟಿ ಮಾಡಿ ನೈತಿಕ ಧೈರ್ಯ ತುಂಬಿತು.
ಮನೆಯಲ್ಲಿ ತಾಯಿ ಮಗಳು ಅಜ್ಜ ಮಾತ್ರ ವಾಸವಾಗಿದ್ದರು. ಮುಂದೆ ಯಾವುದೇ ಸಮಯದಲ್ಲಿ ಸಹಾಯಕ್ಕೆ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿ ಬಂದೇವು. ಮನೆಯವರೂ ಸಂತೋಷ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದರು ಎಂದು ನಿಯೋಗ ತಿಳಿಸಿದೆ.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಕಾಂ ನಾಗರತ್ನ ನಾಡ, ಜಿಲ್ಲಾ ಸಮಿತಿ ಸದಸ್ಯರಾದ ಸುಭಾಶ್ಚಂದ್ರ ನಾಯಕ್, ಕಾಂ ಶೀಲಾವತಿ ಇದ್ದರು. ಬೈಂದೂರು ತಾಲೂಕು ಸಿಪಿಎಂ ಸದಸ್ಯರಾದ ಶೋಭ ಕೆರೆಮನೆ ಇದ್ದರು. ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ಉದಯ ಪೂಜಾರಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.