×
Ad

ಶಿರ್ವ: ರಸ್ತೆ ಬದಿ ನಿಂತಿದ್ದವರಿಗೆ ಬೈಕ್ ಢಿಕ್ಕಿ: ತಂದೆ ಮೃತ್ಯು, 6 ವರ್ಷದ ಮಗ ಗಂಭೀರ

Update: 2022-09-22 12:55 IST

ಶಿರ್ವ, ಸೆ.22: ಬೈಕೊಂದು ಢಿಕ್ಕಿ(Accident) ಹೊಡೆದ ಪರಿಣಾಮ ರಸ್ತೆಬದಿ ನಿಂತಿದ್ದ ವ್ಯಕ್ತಿಯೋರ್ವ ಮೃತಪಟ್ಟು, ಆತನ ಆರು ವರ್ಷದ ಪುತ್ರ ಗಂಭೀರ ಗಾಯಗೊಂಡ ಘಟನೆ ಗ್ರಾಮದ ಬಂಟಕಲ್ ಪೇಟೆಯಲ್ಲಿರುವ ಸೆ.21ರಂದು ರಾತ್ರಿ ನಡೆದಿದೆ.

ಮೃತರನ್ನು ಬಾಗಲಕೋಟೆ ಜಿಲ್ಲೆ ಇಳಕಲ್‌ ತಾಲೂಕಿನ ನಿವಾಸಿ ಶರಣಪ್ಪ ಬಾಲಪ್ಪ ಗಂಜಿಹಾಳ(40) ಎಂದು ಗುರುತಿಸಲಾಗಿದೆ. ಅವರ ಪುತ್ರ ಶ್ರವಣ್ ಕುಮಾರ್(6) ಗಂಭೀರವಾಗಿ ಗಾಯಗೊಂಡಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶರಣಪ್ಪ ಬುಧವಾರ ರಾತ್ರಿ 7 ಗಂಟೆ ಸುಮಾರಿಗೆ ತನ್ನ ಪುತ್ರ ಶ್ರವಣ್ ಕುಮಾರ್ ನನ್ನು ಕರೆದುಕೊಂಡು ದಿನಸಿ ಸಾಮಗ್ರಿಗಳನ್ನು ತರಲೆಂದು ಬಂಟಕಲ್ಲು ಪೇಟೆಯ ಆಶಾ ಕಾಂಪ್ಲೆಕ್ಸ್ ಎದುರುಗಡೆ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಶಂಕರಪುರ ಕಡೆಯಿಂದ ಅತೀ ವೇಗವಾಗಿ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶರಣಪ್ಪ ರಾತ್ರಿ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಬಳಿ ಬೈಕ್ ಸವಾರ ಬೈಕನ್ನು ಘಟನಾ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News