ರಶ್ಯ: 18ರಿಂದ 65 ವರ್ಷದವರಿಗೆ ವಿಮಾನ ಟಿಕೆಟ್ ನಿಷೇಧ

Update: 2022-09-22 16:51 GMT

ಮಾಸ್ಕೊ, ಸೆ.22: ರಶ್ಯದಲ್ಲಿ 18-65 ವಯೋಮಾನದ ಪುರುಷರಿಗೆ ವಿಮಾನ ಪ್ರಯಾಣದ ಟಿಕೆಟನ್ನು ಮಾರಾಟ ಮಾಡುವುದನ್ನು ಅಲ್ಲಿಯ ವಿಮಾನಯಾನ ಸಂಸ್ಥೆಗಳು ನಿಲ್ಲಿಸಿವೆ ಎಂದು ವರದಿಯಾಗಿದೆ. 

ರಶ್ಯದ 2 ಮಿಲಿಯನ್ ಬಲದ ಮೀಸಲು ಸೇನೆಯ ಭಾಗಶಃ ಸಜ್ಜುಗೊಳಿಸುವಿಕೆಗೆ  ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಆದೇಶ ಜಾರಿಗೊಳಿಸಿದ ಬಳಿಕ ಆ ದೇಶದಿಂದ ಹೊರಹೋಗುವ ಬಹುತೇಕ ವಿಮಾನಗಳ ಟಿಕೆಟ್ ಸೋಲ್ಡ್‍ಔಟ್ ಆಗಿತ್ತು.

ಈ ಮಧ್ಯೆ, ರಶ್ಯ- ಪೂರ್ವ ಫಿನ್ಲ್ಯಾಂಡ್ ಗಡಿಭಾಗದಲ್ಲಿ ರಸ್ತೆ ಸಂಚಾರ ಬುಧವಾರ ರಾತ್ರಿಯಿಂದ ಅಧಿಕಗೊಂಡಿದ್ದು ಗುರುವಾರ ಮತ್ತಷ್ಟು ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೆರೆಯ ದೇಶಗಳಾದ ಅರ್ಮೇನಿಯಾ, ಜಾರ್ಜಿಯಾ, ಅಝರ್‍ಬೈಜಾನ್ ಮತ್ತು ಕಝಕ್‍ಸ್ತಾನಕ್ಕೆ ನೇರಸಂಪರ್ಕ ಕಲ್ಪಿಸುವ ವಿಮಾನಗಳ ಟಿಕೆಟ್ ಕೂಡಾ ಮಾರಾಟವಾಗಿದೆ ಎಂದು ರಶ್ಯದ ಅವಿಯಾಸೇಲ್ಸ್ ವೆಬ್‍ಸೈಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News