ಜೋಕಟ್ಟೆ : ಪಿಎಫ್ಐ ನಾಯಕರ ಬಂಧನ ಖಂಡಿಸಿ ಪ್ರತಿಭಟನೆ
Update: 2022-09-23 20:14 IST
ಬಜ್ಪೆ, ಸೆ. 23: ದೇಶದ ವಿದಿಧೆಡೆ ಎನ್ ಐಎ ದಾಳಿ ದಾಳಿ ಪಿಎಫ್ಐನ ರಾಷ್ಟ್ರ ಹಾಗೂ ರಾಜ್ಯ ನಾಯಕರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಜೋಕಟ್ಟೆ ನಾಗರೀಕರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ಜೋಕಟ್ಟೆ ಪೇಟೆಯಲ್ಲಿ ಸೇರಿದ ಗ್ರಾಮಸ್ಥರು, ಎನ್ಐಎಯ ಕ್ರಮವನ್ನು ಖಂಡಿಸಿ ಕೇಂದ್ರ ಮತ್ತು ಸರಕಾರ ಹಾಗೂ ಎನ್ಐಎಗೆ ದಿಕ್ಕಾರ ಕೂಗಿದರು. ಪ್ರತಿಭಟನಾನಿರತರನ್ನುದ್ದೇಶಿಸಿ ಎನ್ಐಎ ವಶಕ್ಕೆ ಪಡೆದಿರುವ ರಾಜ್ಯ ಕಾರ್ಯದರ್ಶಿ ಎ.ಕೆ. ಅಶ್ರಫ್ ಅವರ ಸಹೋದರ ಇಕ್ಬಾಲ್ ಎ.ಎಂ. ಮಾತನಾಡಿದರು.
ಪಿಎಫ್ಐ ಜೋಕಟ್ಟೆ ಏರಿಯಾ ಅಧ್ಯಕ್ಷ ಇಮ್ತಿಯಾಝ್, ಶಿಯಾಬ್, ಪಿಎಫ್ಐ ಕಾರ್ಯಕ್ರರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.