ಹೈದರಾಬಾದ್‌ಗೆ ಪ್ರಯಾಣಿಸಲು ಅನುಮತಿ ಕೋರಿದ ವರವರ ರಾವ್ ಮನವಿ ತಿರಸ್ಕರಿಸಿದ ಎನ್‌ಐಎ ಕೋರ್ಟ್

Update: 2022-09-23 18:16 GMT

ಮುಂಬೈ,ಸೆ.23: ಕಣ್ಣಿನ ಪೊರೆಯ ಶಸ್ತ್ರಕ್ರಿಯೆಗೆ ಒಳಗಾಗಲು ಹೈದರಾಬಾದ್‌ಗೆ ಪ್ರಯಾಣಿಸಲು ಅನುಮತಿ ನೀಡಬೇಕೆಂದು ಕೋರಿ ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಆರೋಪಿಯಾಗಿರುವ ಕವಿ ಹಾಗೂ ಮಾನವಹಕ್ಕು ಹೋರಾಟಗಾರ ವರವರ ರಾವ್ ಅವರು ಸಲ್ಲಿಸಿದ್ದ ಮನವಿಯನ್ನು ವಿಶೇಷ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.

82 ವರ್ಷ ವಯಸ್ಸಿನ ವರವರ ರಾವ್ ಅವರಿಗೆ ಸುಪ್ರೀಂಕೋರ್ಟ್ ಕಕಳೆದ ಆಗಸ್ಟ್‌ನಲ್ಲಿ ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡಿತ್ತು. ಆದರೆ ಜಾಮೀನಿಗೆ ಸಂಬಂಧಿಸಿದ ಶರತ್ತುಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ನಿಗದಿಪಡಿಸಲಿದೆಯೆಂದು ತಿಳಿಸಿತ್ತು.

ಎನ್‌ಐಎ ನ್ಯಾಯಾಲಯವು ನಿಗದಿಪಡಿಸಿರುವ ಜಾಮೀನಿನ ಶರತ್ತುಗಳ ಪ್ರಕಾರ ವರವರ ರಾವ್ ಅವರು ಮುಂಬೈ ಮಹಾನಗರದ ವ್ಯಾಪ್ತಿಯಲ್ಲಿಯೇ ವಾಸಿಸಬೇಕಾಗುತ್ತದೆ ಹಾಗೂ ಎನ್‌ಐಎ ನ್ಯಾಯಾಲಯದ ಅನುಮತಿಯಿಲ್ಲದೆ ಮುಂಬೈನಿಂದ ಹೊರತೆರಳುವಂತಿಲ್ಲ.

ವರವರ ರಾವ್ ಅವರು ಶುಕ್ರವಾರ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಕ್ಯಾಟರ್ಯಾಕ್ಟ್ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಳ್ಳಲು ಹಾಗೂ ಆನಂತರದ ವೈದ್ಯಕೀಯ ಶುಶ್ರೂಷೆಗಾಗಿ ಮೂರು ತಿಂಗಳುಗಳ ಹೈದರಾಬಾದ್‌ಗೆ ತೆರಳಲು ಅನುಮತಿ ನೀಡಬೇಕೆಂದು ಕೋರಿದ್ದರು. ಅವರ ಮನವಿಯನ್ನು ಎನ್‌ಐಎ ವಿಶೇಷ ನ್ಯಾಯಾಧೀಶ ಆರ್.ಎನ್. ಬೋಕಡೆ ತಿರಸ್ಕರಿಸಿದರು.ಈ ಮಧ್ಯೆ ಇನ್ನೋರ್ವ ಆರೋಪಿ ಮಹೇಶ್ ರಾವತ್ ಕೂಡಾ ವೈದ್ಯಕೀಯ ಚಿಕಿತ್ಸೆಗೆ ಅವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News