ಭತ್ತದ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಧರಣಿ

Update: 2022-09-24 12:46 GMT

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಫಸಲು ಕಟಾವು ಅಕ್ಟೋಬರ್ ತಿಂಗಳಲ್ಲಿ ಸಂಪೂರ್ಣಗೊಳ್ಳುತ್ತಿರುವು ದರಿಂದ ಸರಕಾರ ನಿಗದಿಪಡಿಸಿದ ಭತ್ತದ ಬೆಂಬಲ ಬೆಲೆಗೆ ಅನುಗುಣವಾಗಿ ಈ ಕೂಡಲೆ ಕರಾವಳಿ ಜಿಲ್ಲೆಗಳಲ್ಲಿ ಖರೀದ ಕೇಂದ್ರ ಆರಂಭಿಸಬೇಕು. ತೆಂಗಿನ ಬೆಳೆಗೆ ಬೆಲೆ ಕುಸಿದ ಕಾರಣ ಸರಕಾರ ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಬೈಂದೂರು ತಾಲೂಕು ಸಂಚಾಲಕ ರಾಜೀವ ಪಡುಕೋಣೆ ಒತ್ತಾಯಿಸಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಇಂದು ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಆಯೋಜಿಸಿದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಬಳಿಕ ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ಮೂಲಕ ಹಕ್ಕೊ ತ್ತಾಯದ ಮನವಿಯನ್ನು ಮುಖ್ಯ ಮಂತ್ರಿಗಳಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಬಾಲಕಷ್ಣ ಶೆಟ್ಟಿ, ಗಣೇಶ ತೊಂಡೆಮಕ್ಕಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಶ್ರೀಧರ ಉಪ್ಪುಂದ, ವಿಜಯ ಕೋಯಾನಗರ, ಮಂಜು ಪೂಜಾರಿ ಪಡುವರಿ, ನಾಗರತ್ನ ನಾಡ, ಶೋಭ, ನಾಗರತ್ನ ಪಡುವರಿ, ರಾಜು ದೇವಾಡಿಗ, ರಮೇಶ ಗುಲ್ವಾಡಿ, ವೆಂಕಟೇಶ ಕೋಣಿ, ಅಣ್ಣಪ್ಪ ದೇವಾಡಿಗ, ಮಣಿಕಂಠ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News