ಕೆನಡಾ: ಜನಾಂಗೀಯ ಆಧಾರಿತ ದ್ವೇಷಾಪರಾಧ ಪ್ರಕರಣದಲ್ಲಿ 182% ಏರಿಕೆ

Update: 2022-09-24 18:10 GMT

ಹೊಸದಿಲ್ಲಿ, ಸೆ.24: ಕೆನಡಾದಲ್ಲಿ 2014ರಿಂದ ಜನಾಂಗ, ಜನಾಂಗೀಯತೆ ಆಧಾರಿತ ದ್ವೇಷ ಅಪರಾಧ ಪ್ರಕರಣದಲ್ಲಿ 182% ಏರಿಕೆ ದಾಖಲಾಗಿದೆ ಎಂದು ಕೆನಡಾದ ಪೊಲೀಸ್ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2021ರಲ್ಲಿ ಅತ್ಯಧಿಕ ದ್ವೇಷ ಅಪರಾಧ ಪ್ರಕರಣ ದಾಖಲಾದ ಕೆನಡಾದ ನಗರಗಳಲ್ಲಿ ಟೊರಂಟೊ-779, ವ್ಯಾಂಕೋವರ್ 429, ಮೊಂಟ್ರಾಲ್ 260, ಒಟ್ಟಾವ 260 ಮತ್ತು ಕ್ಯಾಲ್ಗರಿ ಅಗ್ರಸ್ಥಾನದಲ್ಲಿವೆ. 2021ರಲ್ಲಿ ದಕ್ಷಿಣ ಏಶ್ಯ ಸಮುದಾಯದವರನ್ನು ಗುರಿಯಾಗಿಸಿದ ಅಪರಾಧ ಪ್ರಕರಣಗಳಲ್ಲಿ 21% ಹೆಚ್ಚಳ ದಾಖಲಾಗಿದೆ ಎಂದು ವರದಿ ಹೇಳಿದೆ.

 ‘ಕೆನಡಿಯನ್ ಸೆಂಟರ್ ಫಾರ್ ಜಸ್ಟಿಸ್ ಆ್ಯಂಡ್ ಕಮ್ಯುನಿಟಿ ಸೇಫ್ಟಿ’ಯ ಅಂಕಿಅಂಶ ಪ್ರಕಾರ, ಯುಕೋನ್ ಪ್ರಾಂತವನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಾಂತಗಳಲ್ಲೂ 2021ರಲ್ಲಿ ದ್ವೇಷ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳ ದಾಖಲಾಗಿದೆ. ಧರ್ಮವನ್ನು ಗುರಿಯಾಗಿಸಿದ ದ್ವೇಷಾಪರಾಧ(ಯೆಹೂದಿ, ಮುಸ್ಲಿಮ್ ಮತ್ತು ಕ್ಯಾಥೊಲಿಕ್ ಸಹಿತ- 67% ಏರಿಕೆ) ಮತ್ತು ಲೈಂಗಿಕ ಉದ್ದೇಶದ ಅಪರಾಧ ಪ್ರಕರಣ (64% ಏರಿಕೆಯು) ರಾಷ್ಟ್ರೀಯತೆಯ ಬದಲಾವಣೆಗೆ ಸಂಬಂಧಿಸಿದ್ದರೆ, ಜನಾಂಗ ಅಥವಾ ಜನಾಂಗೀಯತೆ ಗುರಿಯಾಗಿಸಿದ ಅಪರಾಧ ಪ್ರಕರಣವೂ ಹೆಚ್ಚಿದೆ ಎಂದು ವರದಿ ಹೇಳಿದೆ.

ಜನಾಂಗ ಅಥವಾ ಜನಾಂಗೀಯತೆಯನ್ನು ಗುರಿಯಾಗಿಸಿಕೊಂಡ ದ್ವೇಷ ಅಪರಾಧಗಳ ಹೆಚ್ಚಳವು ಅರಬ್ ಅಥವಾ ಪಶ್ಚಿಮ ಏಶ್ಯಾದ ಜನಸಂಖ್ಯೆಯನ್ನು ಗುರಿಯಾಗಿಟ್ಟುಕೊಂಡು ಹೆಚ್ಚು ವರದಿಯಾದ ಅಪರಾಧಗಳ ಪರಿಣಾಮವಾಗಿದೆ(46% ಏರಿಕೆ), ಮತ್ತು 2020ರಲ್ಲಿ ಭಾರೀ ಹೆಚ್ಚಳದ ಬಳಿಕ, ಪೂರ್ವ ಅಥವಾ ಆಗ್ನೇಯ ಏಶ್ಯಾದ ಜನಸಂಖ್ಯೆಯನ್ನು (16% ಏರಿಕೆ) ಮತ್ತು ದಕ್ಷಿಣ ಏಶ್ಯಾ ಜನಸಂಖ್ಯೆ(21% ಏರಿಕೆ)ಯನ್ನು ಗುರಿಯಾಗಿಸಿಕೊಂಡ ಹೆಚ್ಚಿನ ಅಪರಾಧದ ಪರಿಣಾಮವಾಗಿದೆ ಎಂದು ವರದಿ ಹೇಳಿದೆ.

ಕೆನಡಾದಲ್ಲಿ 1.6 ಮಿಲಿಯನ್ ಭಾರತೀಯ ಮೂಲದ ಮತ್ತು ಅನಿವಾಸಿ ಭಾರತೀಯರು ನೆಲೆಸಿದ್ದಾರೆ. ಈ ವರ್ಷ ಕೆನಡಾದಲ್ಲಿ ಹಿಂದುಗಳ ದೇವಸ್ಥಾನದ ಮೇಲೆ ಆಕ್ರಮಣ ನಡೆದ 2 ಘಟನೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News