ಫರಂಗಿಪೇಟೆ, ವಳಚ್ಚಿಲ್ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಆತಂಕ

Update: 2022-09-25 02:49 GMT
ಸಾಂದರ್ಭಿಕ ಚಿತ್ರ

ಬಂಟ್ವಾಳ, ಸೆ.25: ಫರಂಗಿಪೇಟೆ, ವಳಚ್ಚಿಲ್ ಪರಿಸರದಲ್ಲಿ ಶನಿವಾರ ಚಿರತೆಯೊಂದು ಕಾಣಿಸಿಕೊಂಡ ಬಗ್ಗೆ ವರದಿಯಾಗಿದ್ದು, ಇದರಿಂದ ಈ ಪರಿಸರದ ಜನತೆಯಲ್ಲಿ ಆತಂಕ ಉಂಟು ಮಾಡಿದೆ. 

ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಮಾರಿಪಳ್ಳದ ನಿವಾಸಿ ರಫೀಕ್ ಎಂಬವರು ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಫರಂಗಿಪೇಟೆ ಸಮೀಪದ ಹತ್ತನೇ ಮೈಲುಗಲ್ಲು ಎಂಬಲ್ಲಿ ಚಿರತೆಯೊಂದನ್ನು ನೋಡಿದ್ದಾಗಿ ತಿಳಿಸಿದ್ದಾರೆ. 

ಹತ್ತನೇ ಮೈಲುಗಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಚಿರತೆಯನ್ನು ನೋಡಿದ್ದು ಕೂಡಲೇ ಅದು ಹೆದ್ದಾರಿ ಪಕ್ಕದ ಖಾಲಿ ಜಾಗದಲ್ಲಿ ಓಡಿದೆ ಎಂದು ತಿಳಿಸಿದ್ದಾರೆ. 

ಚಿರತೆಯ ಬಗ್ಗೆ ಅವರು ಪಕ್ಕದ ಹೊಟೇಲ್ ಒಂದರಲ್ಲಿದ್ದ ಸ್ಥಳೀಯರಲ್ಲಿ ಮಾಹಿತಿ ನೀಡಿದ್ದು ಬಳಿಕ ಈ ಸುದ್ದಿ ಪರಿಸರದಲ್ಲಿ ಹರಿದಾಡಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. 

ಫರಂಗಿಪೇಟೆ ಸಮೀಪದ ವಳಚ್ಚಿಲ್ ಪದವು ಎಂಬಲ್ಲಿನ ಜನರು ಶನಿವಾರ ಬೆಳಗ್ಗೆ ಪರಿಸರದಲ್ಲಿ ಚಿರತೆಯೊಂದನ್ನು ನೋಡಿದ್ದ ಬಗ್ಗೆ ಸುದ್ದಿ ತಿಳಿದು ಬಂದಿದೆ. ಅದೇ ಚಿರತೆ ರಾತ್ರಿ ಹತ್ತನೇ ಮೈಲುಗಲ್ಲಿನಲ್ಲಿ ಕಂಡುಬಂದಿರಬಹುದು ಎಂದು ಸ್ಥಳೀಯ ಜನರು ತಿಳಿಸಿದ್ದಾರೆ‌.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಪುದು ಗ್ರಾಮ ಪಂಚಾಯತ್‌ ಅಧ್ಯಕ್ಷ ರಮ್ಲಾನ್‌ ಮಾರಿಪಳ್ಳ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News