×
Ad

ಮದನಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ

Update: 2022-09-25 08:56 IST

ಉಳ್ಳಾಲ: ಅಳೇಕಲದ ಮದನಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ 2022-23 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಮದಕದ ಸರಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಕ್ಷೇತ್ರದ ಶಾಸಕರು ಹಾಗೂ ವಿದಾನ ಸಭಾ ವಿರೋಧ ಪಕ್ಷದ ಉಪನಾಯಕರೂ ಆದ ಯು.ಟಿ ಖಾದರ್ ನೆರವೇರಿಸಿದರು. ತಮ್ಮಉದ್ಘಾಟನಾ ಭಾಷಣದಲ್ಲಿ ಅವರು ಬದಲಾಗುತ್ತಿರುವ ಜೀವನ ಶೈಲಿಯೊಂದಿಗೆ ಹೊಂದಾಣಿಕೆಯ ಬದುಕು ಹಾಗೂ ತಾಳ್ಮೆ, ಸಂಯಮ ಗುಣಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಮುನ್ನಡೆದರೆ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ  ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜನಾಡಿ ಗ್ರಾಮ ಪಂ. ಸದಸ್ಯ ಅಬ್ಬಾಸ್ ಮದ್ಪಪಾಡಿ ಶಿಬಿರಕ್ಕೆ ಹಾಗೂ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಸ್ಥಳೀಯ ಪಂ. ಸದಸ್ಯ ಮುಹಮ್ಮದ್ ಅಸೈ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಮಂಜನಾಡಿ ಪಂಚಾಯತಿನ ಸ್ಥಳೀಯ ಸದಸ್ಯರಾದ ಸರೋಜಿನಿ, ಕ್ರಿಸ್ತಿನಾ ಮೊಂತೆರೊ ಹಾಗೂ ಕೌಸರ್ ಬಾನು ಹಾಜರಿದ್ದರು.

ಸ್ಥಳೀಯ ಸಾಮಾಜಿಕ ಮುಖಂಡರಾದ ನಿಯಾಝ್ ಸಾಮಣಿಗೆ, ಮನ್ಸೂರ್ ಸಾಮಣಿಗೆ ಹಾಗೂ ಸರಕಾರಿ ಮುಸ್ಲಿಂ ವಸತಿಶಾಲೆಯ ಪ್ರಾಂಶುಪಾಲರಾದ ಉಮರಬ್ಬ ಮಾಸ್ಟರ್, ಅಧ್ಯಾಪಕರಾದ ಮಂಜುನಾಥ ಭಟ್, ಹಸೀನಾ ಬಾನು, ಮುಹಮ್ಮದ್ ಹನೀಫ್, ಅಸೈ ಶಂಶುಲ್ ಉಲಮಾ ಜುಮಾ ಮಸ್ಜಿದ್ ನ ಅಧ್ಯಕ್ಷರಾದ ಎಂ.ಎಂ ಇಸ್ಮಾಯಿಲ್, ಮದನಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಅಬ್ದುಲ್ ಅಝೀಝ್ ತಂಝೀಲ್, ಮಂಜನಾಡಿ ಗ್ರಾಮ ಪಂ. ಸದಸ್ಯರಾದ ಪಿ.ಎಸ್ ಅತ್ತಾವುಲ್ಲಾ, ಅಶ್ರಫ್ ಉರುಮಣೆ, ಮೋನು ಕಲ್ಕಟ್ಟ, ಶಿಬಿರಾಧಿಕಾರಿಗಳಾದ ಮುಹಮ್ಮದ್ ಅಶ್ರಫ್, ಭೂಗೋಳ ಶಾಸ್ತ್ರ ಉಪನ್ಯಾಸಕರಾದ ಬಾಲಕೃಷ್ಣ. ಕೆ, ಅಧ್ಯಾಪಕರಾದ ಸಂತೋಷ್ ಕುಮಾರ್‌ ಉಪಸ್ಥಿತರಿದ್ದರು.

ಮದನಿ ಕಾಲೇಜಿನ ಪ್ರಾಂಶುಪಾಲರಾದ ಇಸ್ಮಾಯಿಲ್.ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಹಬೀಬ್ ರಹಿಮಾನ್ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕಿ ಅರ್ಚನಾ ವಂದಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಮುಹಮ್ಮದ್ ಫಾಝಿಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News