ಬಂಟ್ವಾಳ: 'ಮೀಫ್' ವತಿಯಿಂದ ಮೊಂಟೆಸ್ಸರಿ ಶಿಕ್ಷಕರ ತರಬೇತಿ ಶಿಬಿರ
ಬಂಟ್ವಾಳ: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ ( MEIF) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವತಿಯಿಂದ ಈಸ್ಟ್ ಝೋನ್ ಮೊಂಟೆಸ್ಸರಿ(KG) ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವು ಶನಿವಾರ ಬಂಟ್ವಾಳದ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರಿಯಾಝ್ ಹುಸೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 'ಮೀಫ್' ಒಕ್ಕೂಟದ ಅಧ್ಯಕ್ಷರಾದ ಮೂಸಬ್ಬ ಪಿ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು.
(MEIF ) ಒಕ್ಕೂಟದ ವಲಯ ಉಪಾಧ್ಯಕ್ಷರಾದ ಕೆ. ಎಂ ಮುಸ್ತಫ ಸುಳ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ತೌಹೀದ್ ಆಂಗ್ಲ ಮಾದ್ಯಮ ಶಾಲೆ (T.E.M.S) ಇದರ ಕರೆಸ್ಪಾಂಡೆಂಟ್ ಸಗೀರ್ ಅಹ್ಮದ್ ಈ ತರಬೇತಿ ಕಾರ್ಯಗಾರವನ್ನು ಪ್ರಾಯೋಜಿಸಿದ್ದು, ಮಂಗಳೂರಿನ ಯೇನಪೋಯ ವಿದ್ಯಾಸಂಸ್ಥೆಯ ಅಕ್ಷರ ಹೌಸ್ ಆಫ್ ಚಿಲ್ಡ್ರನ್ ವಿಭಾಗದ ತರಬೇತುದಾರರು ತರಬೇತಿಯನ್ನು ಕೈಗೊಂಡರು.
ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯ ತಾಲೂಕುಗಳ MEIF ವಿದ್ಯಾಸಂಸ್ಥೆಗಳ ಒಟ್ಟು 85 ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಯೇನಪೋಯ ವಿದ್ಯಾ ಸಂಸ್ಥೆಯ P.R.O ತ್ರಿಶಾ ಹಾಗೂ ಇತರ ತರಬೇತುದಾರರು ಹಾಜರಿದ್ದರು.
ಒಂದು ದಿನದ ಈ ಕಾರ್ಯಾಗಾರವು ಸಮಸ್ತರ ಸಮ್ಮುಖದಲ್ಲಿ ಯಶಸ್ಸನ್ನು ಕಂಡಿತು.
ಕಾರ್ಯಗಾರವನ್ನು ಬುರೂಜ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಹ್ಮತುಲ್ಲ ರವರು ಸ್ವಾಗತಿಸಿ, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮೆಟಿಲ್ಡ ಡಿ ಕೋಸ್ಟಾ ವಂದಿಸಿದರು.