ಮಂಗಳೂರಿನ ನೀರು ಮಾರ್ಗದಲ್ಲಿ ಕೃಷಿ ಮೇಳ

Update: 2022-09-25 11:58 GMT

ಮಂಗಳೂರು: ತಾಲೂಕಿನ ನೀರುಮಾರ್ಗದಲ್ಲಿ ಸ್ಥಳೀಯ ನೀರು ಮಾರ್ಗ  ಸೇವಾ  ಸಹಕಾರಿ ಸಂಘದ ಸಭಾಂಗಣದಲ್ಲಿ ಇಂದು ಕೃಷಿ ಮೇಳ ನಡೆಯಿತು. ಕಥೋಲಿಕ್‌ ಸಭಾ ಮಂಗಳೂರು ಪ್ರದೇಶ ಸಿಟಿ ವಲಯ, ದಕ್ಷಿಣ ಕನ್ನಡ ಜಿಲ್ಲಾ ಹಾಲು  ಉತ್ಪಾದಕರ ಒಕ್ಕೂಟ, ಪ್ರಣವ  ಸೌಹಾರ್ದ  ಸಹಕಾರಿ ನಿಯಮಿತ, ಸಾವಯವ  ಕೃಷಿಕ  ಗ್ರಾಹಕ  ಬಳಗ, ನೀರು ಮಾರ್ಗ  ಸೇವಾ  ಸಹಕಾರಿ ಸಂಘ ಮತ್ತು ನೀರು ಮಾರ್ಗ  ಹಾಲು  ಉತ್ಪಾದಕರ ಸಹಕಾರಿ  ಸಂಘದ ಸಹಯೋಗದೊಂದಿಗೆ  ಆಯೋಜಿಸಲಾಗಿದ್ದ ಕೃಷಿ ಮೇಳವನ್ನು ಉಪಸ್ಥಿತರಿದ್ದ ಮುಖ್ಯ ಅತಿಥಿಗಳು ಕಳಸಿಗೆಗೆ ಅಕ್ಕಿ ಹಾಕುವ ಮೂಲಕ ಉದ್ಘಾಟಿಸಿದರು.

ಕಥೋಲಿಕ್  ಸಭಾ  ಮಂಗಳೂರು ಪ್ರದೇಶ ಸಿಟಿ ವಲಯದ ಆಧ್ಯಾತ್ಮಿಕ  ನಿರ್ದೇಶಕ ಹಾಗೂ ಮಂಗಳೂರಿನ ಆಂಜೆಲೋರ್‌ ಚರ್ಚ್‌ನ ಪ್ರಧಾನ ಗುರು ವಂ। ವಿಲಿಯಂ  ಮಿನೇಜಸ್, ಸಿಟಿ ವಲಯದ ಮುಖ್ಯ ಗುರು ಹಾಗೂ ವಾಮoಜೂರು  ಚರ್ಚಿನ  ಪ್ರಧಾನ ಗುರು ವಂ। ಜೇಮ್ಸ್ ಡಿಸೋಜಾ , ಕಥೋಲಿಕ್‌  ಸಭಾ ಮಂಗಳೂರು ಪ್ರದೇಶ ಇದರ ಕೇಂದ್ರ ಸಮಿತಿ ಅಧ್ಯಕ್ಷ ಸ್ಟಾನಿ ಲೋಬೊ, ದಕ್ಷಿಣ ಕನ್ನಡ ಜಿಲ್ಲಾ ಹಾಲು  ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ  ಶೆಟ್ಟಿ, ಪ್ರಣವ  ಸೌಹಾರ್ದ  ಸಹಕಾರಿ ನಿಯಮಿತ  ಮಂಗಳೂರು  ಮತ್ತು ಸಾವಯವ  ಕೃಷಿಕ  ಗ್ರಾಹಕ  ಬಳಗದ ಅಧ್ಯಕ್ಷ ಹಾಗೂ ದಕ್ಷಿಣ  ಕನ್ನಡ ಜಿಲ್ಲಾ ಸೌಹಾರ್ದ  ಸಹಕಾರಿ ನಿಯಮಿತ ಇದರ ಉಪಾಧ್ಯಕ್ಷ ಜಿ.ಆರ್ ಪ್ರಸಾದ್, ನೀರು ಮಾರ್ಗ  ಸೇವಾ  ಸಹಕಾರಿ ಸಂಘದ ಅಧ್ಯಕ್ಷರು  ಸೆಲಿನ್ ಡಿ ಮೆಲ್ಲೊ, ನೀರು ಮಾರ್ಗ  ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಜಾನೆಟ್ ಪಿರೇರ ಅವರು ಮುಖ್ಯ ಅತಿಥಿಗಳಾಗಿದ್ದರು.

ಫೋರ್ ವಿಂಡ್ಸ್ ಸಂಸ್ಥೆಯ ನಿರ್ದೇಶಕ ಎಲಿಯಾಸ್‌ ಫೆರ್ನಾಂಡಿಸ್, ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಕಾರ್ಯದರ್ಶಿ ನೋರಿನ್ ಪಿಂಟೊ, ತೋಟಗಾರಿಕೆ ಇಲಾಖೆಯ  ಹಿರಿಯ ಸಹಾಯಕ  ನಿರ್ದೇಶಕ ಪ್ರವೀಣ್  ಕೆ., ಕೆಎಂಎಫ್ ಪಶು ವೈದ್ಯ ಡಾ. ನಿತ್ಯಾನಂದ ಭಕ್ತ,  ಪ್ರಾಧ್ಯಾಪಕಿ  ಸ್ನೇಹ ಭಟ್,  ಪುತ್ತೂರು ಪ್ರಗತಿಪರ ಕೃಷಿಕ ಹರಿಕೃಷ್ಣ ಕಾಮತ್, ವಿಲ್ಫ್ರೆಡ್ ಅಲ್ವಾ ರಿಸ್, ವಿಲ್ಮ ಮೊಂತೇರೊ, ಕಥೋಲಿಕ್  ಸಭಾ ಸಿಟಿ ವಲಯದ ಸಮುದಾಯ ಅಭಿವೃದ್ಧಿ  ಸಂಚಾಲಕ  ಹಾಗೂ ಕೃಷಿ  ಮೇಳದ ಸಂಯೋಜಕ ಸಂತೋಷ್ ಸಲ್ದಾನ್ಹಾ ಅವರು ಉಪಸ್ಥಿತರಿದ್ದರು.

ಮೇಳದಲ್ಲಿ ಕೃಷಿ ಬಗ್ಗೆ, ಕೃಷಿ  ಉತ್ಪನ್ನ  ಹಾಗೂ ಉಪಕರಣ,  ಗ್ರಹೋದ್ಯಮ ವಸ್ತುಗಳ ಮಾರಾಟ, ಹೈನುಗಾರಿಕೆ, ಸಾವಯವ  ಕೃಷಿ, ಅಡಿಕೆ,  ತೆಂಗು, ತರಕಾರಿ  ಮತ್ತು ಕೃಷಿ  ಬಗ್ಗೆ  ಸರಕಾರದಿಂದ  ಸಿಗುವ ಸವಲತ್ತುಗಳ  ಬಗ್ಗೆ ಮಾಹಿತಿಯನ್ನು  ಸಂಪನ್ಮೂಲ ವ್ಯಕ್ತಿಗಳಿಂದ  ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News