ಉಡುಪಿ: ಹೂಡೆ ಬೀಚ್‌ನಲ್ಲಿ ಮಣಿಪಾಲ ಎಂಐಟಿ ವಿದ್ಯಾರ್ಥಿ ಸಮುದ್ರಪಾಲು

Update: 2022-09-25 13:46 GMT

ಮಲ್ಪೆ, ಸೆ. 25: ಹೂಡೆ ಸಮೀಪದ ಬೀಚ್‌ನಲ್ಲಿ ನೀರಿಗೆ ಇಳಿದಿದ್ದ ಮಣಿಪಾಲ ವಿದ್ಯಾರ್ಥಿಗಳ ಪೈಕಿ ಓರ್ವ ಸಮುದ್ರ ಪಾಲಾಗಿ, ಇಬ್ಬರು ತೀವ್ರವಾಗಿ ಅಸ್ವಸ್ಥ ಗೊಂಡ ಘಟನೆ ರವಿವಾರ ಸಂಜೆ 6ಗಂಟೆಯ ಸುಮಾರಿಗೆ ನಡೆದಿದೆ.

ಓರ್ವ ವಿದ್ಯಾರ್ಥಿ ಸಮುದ್ರ ಪಾಲಾಗಿದ್ದು, ಅಸ್ವಸ್ಥಗೊಂಡ ಹೈದರಾಬಾದ್ ಮತ್ತು ಬೆಂಗಳೂರು ಮೂಲದ ವಿದ್ಯಾರ್ಥಿಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಮಪಾಲ ಎಂಐಟಿಯ ವಿದ್ಯಾರ್ಥಿಗಳಾಗಿದ್ದಾರೆ.

ವಾರಾಂತ್ಯದ ಹಿನ್ನೆಲೆಯಲ್ಲಿ ಎಂಐಟಿಯ ಸುಮಾರು 15 ಮಂದಿ ವಿದ್ಯಾರ್ಥಿಗಳು ಹೂಡೆ ಬೀಚ್‌ನಲ್ಲಿ ವಿಹಾರಕ್ಕೆಂದು ಬಂದಿದ್ದರು. ಅಲ್ಲಿ ಕೆಲವರು ಸಮುದ್ರದ ನೀರಿನಲ್ಲಿ ಆಡುತ್ತಿದ್ದ ವೇಳೆ ಮೂವರು ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿಕೊಂಡು ಹೋದರು. ಅದರಲ್ಲಿ ಇಬ್ಬರನ್ನು ರಕ್ಷಿಸಿ ಮೇಲಕ್ಕೆ ತರಲಾಯಿತು. ಇವರು ತೀವ್ರವಾಗಿ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News