ಮಹಾಲಯ ಅಮಾವಾಸ್ಯೆ: ಮಲ್ಪೆಯಲ್ಲಿ ಸಮುದ್ರಸ್ನಾನ

Update: 2022-09-25 13:53 GMT

ಮಲ್ಪೆ, ಸೆ.25: ಮಹಾಲಯ ಅಮಾವಾಸ್ಯೆ ಪ್ರಯುಕ್ತ ರವಿವಾರ ಮಲ್ಪೆ ವಡಭಾಂಡೇಶ್ವರ ಸಮುದ್ರತೀರದಲ್ಲಿ ಶ್ರದ್ದಾಳುಗಳು ಗತಿಸಿದ ಹಿರಿಯರಿಗೆ ತಿಲತರ್ಪಣ ನೀಡಿ, ಸಮುದ್ರಸ್ನಾನಗೈದರು.

ಮುಂಜಾನೆ ಗಂಟೆ 5ರಿಂದಲೇ ಜನರು ಸಮುದ್ರಸ್ನಾನಕ್ಕೆ ಬರಲಾರಂಭಿಸಿದ್ದು, ಹೊರಜಿಲ್ಲೆಗಳಿಂದಲೂ ಹೆಚ್ಚಿನ ಭಕ್ತರು ಆಗಮಿಸಿದ್ದರು. ಸಮುದ್ರಸ್ನಾನಗೈದ ಬಹುತೇಕ ಭಕ್ತರು ಬಲರಾಮ ದೇವರ ದರ್ಶನ ಪಡೆದು. ರವಿವಾರ ರಜೆಯಾಗಿರುವುದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News