ಅಮೆರಿಕ: ಕಿರ್ಪಾನ್ ಹೊಂದಿದ್ದಕ್ಕೆ ಸಿಖ್ ವಿದ್ಯಾರ್ಥಿ ಬಂಧನ

Update: 2022-09-25 18:47 GMT
PHOTO SOURCE: TWITTER/
@NeolithicSheep

ವಾಷಿಂಗ್ಟನ್, ಸೆ.25: ಕಿರ್ಪಾನ್(ಚಾಕು ಮಾದರಿಯ ಆಯುಧ) ಹೊಂದಿದ್ದಕ್ಕೆ ಸಿಖ್ ವಿದ್ಯಾರ್ಥಿಯನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದ್ದು , ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ನಾರ್ಥ್ ಕರೋಲಿನಾ ವಿವಿಯ ಆವರಣದಲ್ಲಿ ಈ ಘಟನೆ ನಡೆದಿದ್ದು ಈ ಕುರಿತ ವೀಡಿಯೊವನ್ನು ಆ ವಿದ್ಯಾರ್ಥಿ ಸ್ವತಃ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ತನ್ನ ಬಳಿಯಿದ್ದ ಕಿರ್ಪಾನ್ ಅನ್ನು ಅಧಿಕಾರಿ ಸೆಳೆದುಕೊಳ್ಳಲು ಮುಂದಾದಾಗ ತಾನು ವಿರೋಧಿಸಿದೆ. ಆಗ ಆ ಅಧಿಕಾರಿ ಕೈಗಳನ್ನು ಕಟ್ಟಿಹಾಕಿ ಬಂಧಿಸಿದ್ದಾರೆ ಎಂದು ವಿದ್ಯಾರ್ಥಿ ಟ್ವೀಟ್ ಮಾಡಿದ್ದಾನೆ. ವಿಶ್ವವಿದ್ಯಾನಿಲಯದ ಆವರಣದಲ್ಲಿದ್ದಾಗ ಕೆಲವರು ಪೊಲೀಸರಿಗೆ ಕರೆ ಮಾಡಿ ಕರೆಸಿಕೊಂಡಿದ್ದರು ಎಂದಾತ ಹೇಳಿದ್ದಾನೆ. ಅಮೆರಿಕ ಪೊಲೀಸರ ವರ್ತನೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News